ಕಿಚ್ಚ ಸುದೀಪ್‌ರಿಂದ ಸ್ಫೂರ್ತಿ ಪಡೆದ ಅಭಿಮಾನಿ | ವರ್ಕೌಟ್ ಮಾಡಿ 25 ಕೆಜಿ ಇಳಿಸಿಕೊಂಡ ಅಭಿಮಾನಿ | 

ಬೆಂಗಳೂರು (ನ. 16): ಸ್ಟಾರ್ ನಟರು ಏನೇ ಮಾಡಿದ್ರೂ ಅವರನ್ನು ಫಾಲೋ ಮಾಡುವ ಅಭಿಮಾನಿ ವರ್ಗವೇ ಇರುತ್ತದೆ. ಸ್ಟಾರ್ ನಟರ ಹೇರ್ ಸ್ಟೈಲ್, ಮ್ಯಾನರಿಸಂ ಎಲ್ಲವನ್ನೂ ಫಾಲೋ ಮಾಡುತ್ತಾರೆ. ಅದನ್ನು ಟ್ರೆಂಡ್ ಮಾಡುತ್ತಾರೆ. 

ಪೈಲ್ವಾನ್‌ಗೆ ಕಿಚ್ಚ ಇಳಿಸಿಕೊಂಡ ತೂಕವೆಷ್ಟು?

ಕಿಚ್ಚ ಸುದೀಪ್ ’ಪೈಲ್ವಾನ್’ ಚಿತ್ರಕ್ಕಾಗಿ ವರ್ಕೌಟ್ ಮಾಡಿದ್ದನ್ನು ನೋಡಿ ಅಭಿಮಾನಿಯೊಬ್ಬ ಸ್ಫೂರ್ತಿಗೊಂಡು ಕಿಚ್ಚ ಸುದೀಪ್ ಅವರೇ ದಂಗಾಗುವಂತೆ ಮಾಡಿದ್ದಾರೆ. ಸುದೀಪ್ ರಂತೆ ಅಭಿಮಾನಿಯೊಬ್ಬ ದೇಹ ದಂಡಿಸಿ ತೂಕ ಇಳಿಸಿಕೊಂಡಿದ್ದಾರೆ. 

Scroll to load tweet…

ಸುಧೀಂದ್ರ ಕುಲಕರ್ಣಿ ಎಂಬ ಅಭಿಮಾನಿ ತಮ್ಮ ದೇಹ ದಂಡಿಸಿಕೊಂಡಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಪೈಲ್ವಾನ್ ನಿಂದ ಇನ್ಸ್ ಪೈರ್ ಆಗಿ ಸತತ ನಾಲ್ಕು ತಿಂಗಳು ವರ್ಕೌಟ್ ಮಾಡಿ ಈತ ಬರೋಬ್ಬರಿ 25 ಕೆಜಿ ತೂಕ ಕಳೆದುಕೊಂಡಿದ್ದಾರೆ. ಸೊಂಟದ ಸಳತೆ 44 ರಿಂದ 36 ಕ್ಕೆ ಇಳಿದಿದೆ. ಮೊದಲು ತುಂಬಾ ದಪ್ಪವಿದ್ದ ಇವರು ಈಗ ಫುಲ್ ಸ್ಲಿಮ್ ಆಗಿದ್ದಾರೆ.