ನಟನೆ ಎಂದರೆ ಮೈ ಮರೆಯುವ ಕಿಚ್ಚ ಸುದೀಪ್ ತಮ್ಮ ಮುಂಬರುವ ಚಿತ್ರ 'ಪೈಲ್ವಾನ್'ಗೆ ತೂಕ ಇಳಿಸಿಕೊಂಡಿದ್ದಾರೆ. ಇಳಿಸಿಕೊಂಡಿದ್ದು ಎಷ್ಚು ತೂಕ? ಇದಕ್ಕೆ ಯಾರು ಸ್ಫೂರ್ತಿ?
ಕಿಚ್ಚ ಸುದೀಪ್ 'ಮಿ.ಪರ್ಫೆಕ್ಷನಿಸ್ಟ್'. ನಟನೆ ಎಂದಾಗ ಸಂಪೂರ್ಣವಾಗಿ ಇನ್ವಾಲ್ವ್ ಆಗೋ ಈ ನಟ ಇದೀಗ ಮತ್ತೆ ತಮ್ಮ ಸಾಮರ್ಥ್ಯ, ಮನೋಬಲ ಹೇಗಿದೆ ಎಂಬುವುದನ್ನು ಪ್ರೂವ್ ಮಾಡಿದ್ದಾರೆ.
ಹೈದರಾಬಾದ್‌ನಲ್ಲಿ ನಡೆಯುತ್ತಿರುವ 'ಪೈಲ್ವಾನ್' ಚಿತ್ರದ ಚಿತ್ರೀಕರಣಕ್ಕೆ ಬರೋಬ್ಬರಿ 16 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸೊಂಟದ ಸುತ್ತಳತೆಯನ್ನೂ ಕಡಿಮೆ ಮಾಡಿಕೊಂಡಿರುವುದಾಗಿ ಖುದ್ದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಚಿತ್ರದ ಹೆಸರೇ ಸೂಚಿಸುವಂತೆ ಇದು ಕುಸ್ತು ಪಟುವಿನ ಕಥೆಯುಳ್ಳ ಚಿತ್ರ. ಕುಸ್ತಿ ಪಟುವಾಗಿಯೇ ಅಭನಯಿಸುತ್ತಿರುವ ಕಿಚ್ಚ ಜಿಮ್‌ನಲ್ಲಿ ಕಸರತ್ತು ಮಾಡಿ ಬಾಡಿ ಶೇಪನ್ನು ಬದಲಾಯಿಸಿಕೊಂಡಿದ್ದಾರೆ. 89 ಕೆಜಿ ತೂಗುತ್ತಿದ್ದವರು ಇದೀಗ 73 ಕೆಜಿ ತೂಗಿದರೆ, ಸೊಂಟದ ಸುತ್ತಳತೆಯನ್ನು 36 ಇಂಚಿನಿಂದ 31.5 ಇಂಚಿಗೆ ಇಳಿಸಿಕೊಂಡಿದ್ದಾರೆ.
;
ಇಷ್ಚು ತೂಕ ಕಡಿಮೆ ಮಾಡಿಕೊಳ್ಳಲು ಹೆಲ್ಪ್ ಮಾಡಿದ ಜಿಮ್ ಟ್ರೈನರ್ ಕಬೀರ್ ದುಹಾನ್ ಸಿಂಗ್‌ಗೆ ಸುದೀಪ್ ಬಿಗ್ ಥ್ಯಾಂಕ್ಸ್ ಹೇಳಿ, ಟ್ವೀಟ್ ಮಾಡಿದ್ದಾರೆ.
