ಗುರುನಂದನ್ ಹಾಗೂ ಅವಂತಿಕಾ ಶೆಟ್ಟಿ ಜೋಡಿಯಾಗಿ ನಟಿಸಿರುವ, ಸುದೀಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟಿಸಿದ್ದಾರೆ.

ಬೆಂಗಳೂರು (ಸೆ.26): ಗುರುನಂದನ್ ಹಾಗೂ ಅವಂತಿಕಾ ಶೆಟ್ಟಿ ಜೋಡಿಯಾಗಿ ನಟಿಸಿರುವ, ಸುದೀಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟಿಸಿದ್ದಾರೆ.

ಹಾಡೊಂದಕ್ಕೆ ತಮ್ಮದೇ ಆದ ಸ್ಟೆ‘ಲಿನಲ್ಲಿ ಕಲರ್ ಕಲರ್ ಕಾರು, ಹಾಟ್ ಹುಡುಗಿಯರ ಜತೆ ಎಂಟ್ರಿ ಕೊಡುವ ಇಂದ್ರಜಿತ್ ಲಂಕೇಶ್, ಸಕತ್ ಸ್ಟೆಪ್ ಹಾಕಿದ್ದಾರೆ. ಈ ಹಾಡಿನಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್, ಇಂದ್ರಜಿತ್ ಲಂಕೇಶ್ ಹಾಗೂ ಬಿಗ್‌ಬಾಸ್‌ನ ಪ್ರಥಮ್ ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದಾರೆ. ಇಡೀ ಚಿತ್ರಕ್ಕೆ ಈ ಹಾಡು ಹೈಲೈಟ್ ಆಗಿ ನಿಲ್ಲುತ್ತದೆಯಂತೆ. ಆ ಹಾಡಿನ ಫೋಟೋಗಳ ಝಲಕ್ ಇಲ್ಲಿದೆ. ಕೆ ಎ ಸುರೇಶ್ ಈ ಚಿತ್ರದ ನಿರ್ಮಾಪಕರು.