ಕರಣ್ ಜೋಹರ್ ಮತ್ತು ಅದಾರ್ ಪೂನಾವಾಲಾ ನಿರ್ಮಿಸಿದ ಈ ಹಿಂದಿ ಚಲನಚಿತ್ರ ‘ಹೋಮ್‌ಬೌಂಡ್’, 2026ರ ಆಸ್ಕರ್ ಪ್ರಶಸ್ತಿ ರೇಸ್‌ನಿಂದ ಹೊರ ಬಿದ್ದಿದ್ದು, ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನ ಪಡೆಯಲು ವಿಫಲವಾಗಿದೆ.
ನವದೆಹಲಿ: ಕರಣ್ ಜೋಹರ್ ಮತ್ತು ಅದಾರ್ ಪೂನಾವಾಲಾ ನಿರ್ಮಿಸಿದ ಈ ಹಿಂದಿ ಚಲನಚಿತ್ರ ‘ಹೋಮ್‌ಬೌಂಡ್’, 2026ರ ಆಸ್ಕರ್ ಪ್ರಶಸ್ತಿ ರೇಸ್‌ನಿಂದ ಹೊರ ಬಿದ್ದಿದ್ದು, ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನ ಪಡೆಯಲು ವಿಫಲವಾಗಿದೆ.
98ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನ
ಲಾಸ್ ಏಂಜಲೀಸ್‌ನಲ್ಲಿ ಗುರುವಾರ ನಡೆದ 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ನಾಮನಿರ್ದೇಶನಗಳನ್ನು ಪ್ರಕಟಿಸಿತು. ಹೋಮ್ ಬೌಂಡ್, 15 ಚಿತ್ರಗಳ ಶಾರ್ಟ್‌ಲಿಸ್ಟ್‌ನಲ್ಲಿತ್ತು. ಆದರೆ ಅಂತಿಮ 5ರಲ್ಲಿ ಸ್ಥಾನ ಗಳಿಸಲಿಲ್ಲ.
ಸಿನ್ನರ್ಸ್ ಚಿತ್ರ ವಿವಿಧ ವಿಭಾಗಗಳಲ್ಲಿ ದಾಖಲೆ
ಸಿನ್ನರ್ಸ್ ಚಿತ್ರ ವಿವಿಧ ವಿಭಾಗಗಳಲ್ಲಿ ದಾಖಲೆಯ 16 ನಾಮನಿರ್ದೇಶನಗಳೊಂದಿಗೆ ಎಲ್ಲಕ್ಕಿಂತ ಮುಂದೆ ನುಗ್ಗಿತು.


