ಟಾಲಿವುಡ್‌ ಮಂದಿಯ ಹಾರ್ಟ್‌ ಕದ್ದ ಚೋರಿ ಇಲಿಯಾನ ಎಂದೂ ತಮ್ಮ ಖಾಸಗಿ ವಿಚಾರವನ್ನು ಶೇರ್ ಮಾಡಿಕೊಂಡವರಲ್ಲ. ಆದರೆ ಬಿ ಟೌನ್‌ನಲ್ಲಿ ವಿದೇಶಿ ಫೋಟೋಗ್ರಾಫರ್‌ ಜೊತೆಗೆ ಕಾಣಿಸಿಕೊಂಡದ್ದು ಅಭಿಮಾನಿಗಳಿಗೆ ಶಾಕ್ ಕೊಟ್ಟಿತ್ತು.

ಉಪವಾಸ ಮಾಡಿ ಸಣ್ಣಗಾಗೋದು ಮುರ್ಖತನವೆನ್ನುತ್ತಾರೆ ಇಲಿಯಾನಾ?

 

ಕೆಲ ತಿಂಗಳುಗಳ ಹಿಂದೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿದೇಶಿ ಫೋಟೋಗ್ರಫರ್ ಆಂಡ್ರ್ಯೂ ಜೊತೆ ಫೋಟೋ ಅಪ್ಲೋಡ್ ಮಾಡಿ 'ಬೆಸ್ಟ್‌ ಹಬ್ಬಿ ಎವರ್' ಎಂದು ಬರೆದುಕೊಂಡಿದ್ದರು. ಈಗ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿ ಆಂಡ್ರ್ಯೂನ ಅನ್‌ ಫಾಲೋ ಮಾಡಿದ್ದಾರೆ. ಇದನ್ನು ಗಮನಿಸಿದ ಬಿಟೌನ್‌ ಮಾಧ್ಯಮಗಳು ಹಾಗೂ ಪತ್ರಿಕೆಗಳು ಇವರಿಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಿದೆ.

ಇಲಿಯಾನ ಮದುವೆಯೇ ಆಗದೇ ಪ್ರಗ್ನಂಟ್ ಹೇಗೆ?

ಚಿತ್ರವೊಂದರಲ್ಲಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡ ಇಲಿಯಾನ ಫೋಟೋ ನೋಡಿ ಆಂಡ್ರ್ಯೂ ಜೊತೆಯಿದ್ದ ಸಂಬಂಧದ ಪರಿಣಾಮವೆಂದು ಜಾಲತಾಣದಲ್ಲಿ ವದಂತಿ ಹರಿದಾಡುತ್ತಿತ್ತು. ಇದಕ್ಕೆ ಸ್ವತಃ ಇಲಿಯಾನ ಇದು ಚಿತ್ರವೊಂದರ ಲುಕ್‌ ಎಂದು ಹೇಳುವುದರ ಮೂಲಕ ಸ್ಪಷ್ಟನೆ ನೀಡಿದ್ದರು.