ಕೆಲ ದಿನಗಳ ಹಿಂದೆ ಸೊಶಿಯಲ್ ಮೀಡಿಯಾದಲ್ಲಿ ಬಹುಭಾಷಾ ತಾರೆ ಹನ್ಸಿಕಾ ಮೊಟ್ವಾನಿ ಅವರ ಖಾಸಗಿ ಚಿತ್ರಗಳು ವೈರಲ್ ಆಗಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಹನ್ಸಿಕಾ ಅವರೆ ಅದರ ಬಗ್ಗೆ  ಮಾತನಾಡಿದ್ದಾರೆ.

ಮುಂಬೈ[ಜ.30 ] ನಾನು ನನ್ನ ವೃತ್ತಿ ಜೀವನದ ಮೇಲೆ ಸದ್ಯ ಚಿಂತನೆ ನಡೆಸುತ್ತಿದ್ದೇನೆ. ನನಗೆ ಯಾರ ಗಮನ ಸೆಳೆಯುವ ಆಸೆಯೂ ಇಲ್ಲ.. ಎಂದು ಹನ್ಸಿಕಾ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹ್ಯಾಕರ್‌ಗಳ ಕೈವಾಡದಿಂದ ಅವರ ಖಾಸಗಿ ಫೋಟೋಗಳು ವೈರಲ್ ಆಗಿದ್ದವು. ಈ ಬಗ್ಗೆ ಟ್ವಿಟ್ ಸಹ ಮಾಡಿದ್ದ ಹನ್ಸಿಕಾ ಫೋಟೋಗಳನ್ನು ನಾನೆ ಹಾಕಿದ್ದು ಎಂದು ಭಾವಿಸಿ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಸಂದೇಶ ರವಾನಿಸಬೇಡಿ ಎಂದು ಕೇಳಿಕೊಂಡಿದ್ದರು.

ಹನ್ಸಿಕಾ ಮೊಟ್ವಾನಿ ಖಾಸಗಿ ಚಿತ್ರಗಳು ಲೀಕ್! 

ನಿಜಕ್ಕೂ ನನಗೆ ಆಘಾತ ಕಾದಿದ್ದು. ಸಾರ್ವಜನಿಕವಾಗಿ ನನ್ನ ಫೋಟೋಗಳು ಈ ರೀತಿ ಹಂಚಿಕೆಯಾಗುತ್ತಿದ್ದುದ್ದು ಬೇಸರ ತರಿಸಿತ್ತು ಆದರೆ ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದೆ ಎಂದು ಹೇಳಿದ್ದಾರೆ.


Scroll to load tweet…