ಬೆಂಗಳೂರು(ಸೆ.19): ಹುಚ್ಚ ವೆಂಕಟ್ ಹೊಸ ಸಿನಿಮಾ ಮಾಡುತ್ತಿದ್ದು, ಅದಕ್ಕೆ ಇಟ್ಟಿರುವ ಹೆಸರು ‘ತಿಕ್ಲಾ ಹುಚ್ಚ ವೆಂಕಟ್’. ಈ ಚಿತ್ರಕ್ಕೆ ಮಿಸ್ಟರ್ ಹುಚ್ಚ ವೆಂಕಟ್ ರೋಮ್ಯಾಂಟಿಕ್ ಮೆಲೋಡಿ ಹಾಡನ್ನೂ ಹಾಡಿದ್ದಾರೆ. ಹುಚ್ಚ ವೆಂಕಟ್​ ಜನ್ಮ ದಿನದ ಹಿನ್ನೆಲೆಯಲ್ಲಿ ಈ ಗೀತೆ ಹೊರ ಬಿದ್ದಿದೆ. ಸತೀಶ್ ಸಂಗೀತ ಕೊಟ್ಟಿದ್ದಾರೆ. ಅವರು ಹಾಡಿರುವ ಚಿತ್ರದ ಹಾಡುಗಳು ಯುಟ್ಯೂಬಿನಲ್ಲಿ ಹರಿದಾಡುತ್ತಿದೆ.