ಸೂಪರ್ ಜೋಡಿಯಲ್ಲಿ ವ್ಯಾಲೆನ್ಟೇನ್ಸ್ ಡೇ ಸ್ಪೆಷಲ್ ಎಪಿಸೋಡ್ ಶೂಟ್ ಮಾಡ್ತಿದ್ರು. ಈ ವೇಳೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಾಗಿಣಿ ಜೊತೆ ಹುಚ್ಚ ವೆಂಕಟ್ ಕಿರಿಕ್ ಮಾಡ್ಕೊಂಡಿದ್ದಾರೆ. ಸ್ಪರ್ಧೆಯಲ್ಲಿ ರಾಗಿಣಿ ಕಡಿಮೆ ಅಂಕ ನೀಡಿದ್ರು ಅನ್ನೋ ಕಾರಣಕ್ಕೆ ಹುಚ್ಚ ವೆಂಕಟ್ ಗರಂ ಆದ್ರು.

ಐಟಂ ಸಾಂಗ್ ಬ್ಯಾನ್ ಆಗ್ಬೇಕ್, ನನ್ ಮಗಂದ್.... ಇದು ಸೂಪರ್ ಜೋಡಿ ಸೀಸನ್ 2 ರಲ್ಲಿ ಹುಚ್ಚ ವೆಂಕಟ್ ಹೇಳಿದ ಆಕ್ರೋಶದ ನುಡಿ. ಬ್ಯಾನ್ ಸ್ಟಾರ್ ಹುಚ್ಚ ವೆಂಕಟ್, ಸ್ಟಾರ್ ಸುವರ್ಣ ಚಾನಲ್ ನ ಸೂಪರ್ ಜೋಡಿ ರಿಯಾಲಿಟಿ ಷೋ ನಲ್ಲಿ ಮಿಂಚ್ತಿದ್ದುದು ನಿಮಗೆ ಗೊತ್ತೇ ಇದೆ. ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಫುಲ್ ಎಂಟರ್ಟೇನರ್ ಆಗಿದ್ದ ಇವರು, ಇಲ್ಲೂ ಕೂಡ ಬ್ಯಾನಿಂಗ್ ಸ್ಟಾರ್ ಆಗೋದ್ರು.

ಸೂಪರ್ ಜೋಡಿಯಲ್ಲಿ ವ್ಯಾಲೆನ್ಟೇನ್ಸ್ ಡೇ ಸ್ಪೆಷಲ್ ಎಪಿಸೋಡ್ ಶೂಟ್ ಮಾಡ್ತಿದ್ರು. ಈ ವೇಳೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಾಗಿಣಿ ಜೊತೆ ಹುಚ್ಚ ವೆಂಕಟ್ ಕಿರಿಕ್ ಮಾಡ್ಕೊಂಡಿದ್ದಾರೆ. ಸ್ಪರ್ಧೆಯಲ್ಲಿ ರಾಗಿಣಿ ಕಡಿಮೆ ಅಂಕ ನೀಡಿದ್ರು ಅನ್ನೋ ಕಾರಣಕ್ಕೆ ಹುಚ್ಚ ವೆಂಕಟ್ ಗರಂ ಆದ್ರು. ನಂತರ ಮೈ ಕೈ ತೋರ್ಸೊ ಐಟಂ ಸಾಂಗ್ ಬ್ಯಾನ್ ಮಾಡ್ಬೇಕ್ ಅಂತಾ ಹುಚ್ಚ ವೆಂಕಟ್ ಕಾರ್ಯಕ್ರಮದಿಂದ್ಲೇ ಹೊರ ನಡೆದ್ರು.

ಐಟಂ ಸಾಂಗ್ ವಿಷಯಕ್ಕೆ ರಾಗಿಣಿ ಮತ್ತು ಹುಚ್ಚ ವೆಂಕಟ್ ಮಧ್ಯೆ ಭಾರೀ ವಾಗ್ವಾದ ಕೂಡ ನಡೆಯಿತು. ಸಂಭ್ರಮದಿಂದ ಸೆಲೆಬ್ರೇಟ್ ಮಾಡ್ಬೇಕಿರೊ ವ್ಯಾಲೆಂಟೇನ್ಸ್ ಡೇ ಎಪಿಸೋಡ್ ನಲ್ಲೂ, ಹುಚ್ಚಾ ವೆಂಕಟ್ ಮತ್ತೇ ಬ್ಯಾನಿಂಗ್ ಸ್ಟಾರ್ ಆದ್ರೂ.