ಟೈಟಲ್‌ಗೆ ತಕ್ಕಂತೆ ಈ ಶೋನ ಮೊದಲ ಸೀಜನ್‌ಗೆ ಹತ್ತು ಜೋಡಿಗಳನ್ನು ಆಯ್ಕೆ ಮಾಡಿಕೊಂಡಿದೆ. ಅಲ್ಲಿರುವ ಅಷ್ಟು ಜೋಡಿಗಳ ಪೈಕಿ ಬಿಗ್‌ಬಾಸ್‌ ಖ್ಯಾತಿಯ ನಟ ಹುಚ್ಚ ವೆಂಕಟ್‌ ಕೂಡ ಒಬ್ಬರು. ಅವರಿಗೆ ಜೊತೆಯಾಗಿದ್ದು ಮಾಡೆಲಿಂಗ್‌ ಬೆಡಗಿ ರಚನಾ.
ಕಿರುತೆರೆ ರಿಯಾಲಿಟಿ ಶೋಗಳಲ್ಲಿ ನಟ ಹುಚ್ಚ ವೆಂಕಟ್ಗೆ ಅಷ್ಟೊಂದು ಬೇಡಿಕೆ ಇದೆಯಾ? ವೀಕ್ಷಕರ ದೃಷ್ಟಿಯಿಂದ ಅದು ಇನ್ನು ನಿಗೂಢವಾಗಿ ಉಳಿದಿರುವ ಯಕ್ಷ ಪ್ರಶ್ನೆ. ಆದರೆ ಟಿಆರ್ಪಿ ಕಾರಣಕ್ಕಾಗಿ ಕನ್ನಡದ ಕೆಲವು ಮನರಂಜನೆ ವಾಹಿನಿಗಳಿಗೆ ಮಾತ್ರ ಹುಚ್ಚ ವೆಂಕಟ್ ಮೋಸ್ಟ್ ವಾಂಟೆಡ್ ಪರ್ಸನ್.
ಜನವರಿ 7 ರಿಂದ ‘ಸ್ಟಾರ್ ಸುವರ್ಣ'ದಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ ‘ಸೂಪರ್ ಜೋಡಿ'ಯಲ್ಲೂ ಹುಚ್ಚ ವೆಂಕಟ್ ಇದ್ದಾರೆನ್ನುವುದೇ ಇದಕ್ಕೆ ಪುರಾವೆ ಸಾಕು. ಹಾಗಾದ್ರೆ, ಏನೀದು ‘ಸೂಪರ್ ಜೋಡಿ' ರಿಯಾಲಿಟಿ ಶೋ ಕತೆ? ಹುಚ್ಚ ವೆಂಕಟ್ಗೆ ಅಲ್ಲೇನು ಕೆಲಸ? ಕನ್ನಡ ಕಿರುತೆರೆ ಲೋಕದಲ್ಲಿ ಮೊದಲು ರಿಯಾಲಿಟಿ ಶೋ ಶುರು ಮಾಡಿದ ಖ್ಯಾತಿ ಇದೆ ‘ಸ್ಟಾರ್ ಸುವರ್ಣ'ಕ್ಕಿದೆ. ಸ್ಟಾರ್ಗೆ ಅದು ವರ್ಗಾಯಿಸುವುದಕ್ಕೂ ಮೊದಲಿನಿಂದಲೂ ಅದು ಸಾಕಷ್ಟು ರಿಯಾಲಿಟಿ ಶೋಗಳನ್ನು ನಿರ್ಮಿಸಿ, ಪ್ರಸಾರ ಮಾಡಿದೆ. ಅದೇ ಉತ್ಸಾಹದಲ್ಲೀಗ ಹಿರಿತೆರೆ ಹಾಗೂ ಕಿರುತೆರೆಯ ಜನಪ್ರಿಯ ನಟ-ನಟಿಯರ ಮೂಲಕ ನಾನಾ ಬಗೆಯ ಮನರಂಜನೆಯ ರಸದೌತಣ ನೀಡಲು ಸೂಪರ್ ಜೋಡಿ ಹೆಸರಿನ ಹೊಚ್ಚ ಹೊಸ ರಿಯಾಲಿಟಿ ಶೋ ಶುರುಮಾಡುತ್ತಿದೆ.
Click Here:ಜಿಯೋಗೆ ಸೆಡ್ಡು ಹೊಡೆದ ಏರ್ಟೆಲ್: 1 ವರ್ಷ ಉಚಿತ 4ಜಿ ಸೇವೆ
ಟೈಟಲ್ಗೆ ತಕ್ಕಂತೆ ಈ ಶೋನ ಮೊದಲ ಸೀಜನ್ಗೆ ಹತ್ತು ಜೋಡಿಗಳನ್ನು ಆಯ್ಕೆ ಮಾಡಿಕೊಂಡಿದೆ. ಅಲ್ಲಿರುವ ಅಷ್ಟು ಜೋಡಿಗಳ ಪೈಕಿ ಬಿಗ್ಬಾಸ್ ಖ್ಯಾತಿಯ ನಟ ಹುಚ್ಚ ವೆಂಕಟ್ ಕೂಡ ಒಬ್ಬರು. ಅವರಿಗೆ ಜೊತೆಯಾಗಿದ್ದು ಮಾಡೆಲಿಂಗ್ ಬೆಡಗಿ ರಚನಾ. ಅಸಲಿಗೆ ಈ ಜೋಡಿಯೂ ಸೇರಿದಂತೆ ಅಲ್ಲಿದ್ದವರಿಗೆ ಅಲ್ಲಿ ಎದುರಾಗುವ ಸವಾಲುಗಳು ಎಂಥವು? ಅಲ್ಲಿದ್ದವರ ಫರ್ಫಾಮೆನ್ಸ್ ಹೇಗಿರುತ್ತೆ? ಎನ್ನುವುದನ್ನು ಕಣ್ತುಂಬಿಕೊಳ್ಳುವುದಕ್ಕೆ ಇನ್ನು ಮೂರು ಕಾಯಬೇಕಿದೆ. ಆದರೆ ನಾವಿಲ್ಲಿ ಹೇಳ ಹೊರಟಿದ್ದ ಅಸಲಿ ಸಂಗತಿ ಅದಲ್ಲ.
ಅಲ್ಲಿನ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ನಟ ಹುಚ್ಚ ವೆಂಕಟ್ ಆಟಿಟ್ಯೂಡ್ ಬಗ್ಗೆ. ತಮ್ಮದೇ ನಿರ್ಮಾಣ ಹಾಗೂ ನಿರ್ದೇಶನದ ‘ಹುಚ್ಚ ವೆಂಕಟ್' ಚಿತ್ರದ ಮೂಲಕ ಬೆಳ್ಳಿತೆರೆಗೆ ನಟನಾಗಿ ಎಂಟ್ರಿಯಾದ ಹುಚ್ಚ ವೆಂಕಟ್, ಹೆಚ್ಚು ಜನಪ್ರಿಯತೆ ಪಡೆದಿದ್ದು ‘ಕಲರ್ಸ್' ಕನ್ನಡದ ಬಿಗ್ಬಾಸ್ ರಿಯಾಲಿಟಿ ಶೋ ಮೂಲಕ. ಅದು ಕೂಡ ಕಾಂಟ್ರವರ್ಸಿ ಕಾರಣಕ್ಕೆ. ಮೊದಲು ಬಿಗ್ಬಾಸ್ ‘ಸೀಜನ್ 3' ಗೆ ಕಂಟೆಸ್ಟೆಡ್ ಆಗಿ ಹೋಗಿದ್ದ ವೆಂಕಟ್, ತಮ್ಮದೇ ವಿಚಿತ್ರ ಮತ್ತು ವಿಲಕ್ಷಣ ಮ್ಯಾನರಿಸಂ ಮೂಲಕ ರಾತ್ರೋರಾತ್ರಿ ಮನೆ ಮಾತಾದರು. ಬಿಗ್ಬಾಸ್ ಮನೆಯೊಳಗೆ ತನ್ನದೇ ಮಾತುಗಳ ಮೂಲಕ ನಿತ್ಯವೂ ವಿವಾದೀತ ವ್ಯಕ್ತಿಯಾದರು.
ಮಹಿಳೆಯರ ಬಗ್ಗೆ ತಮಗೆ ಅತೀವ ಗೌರವ ಎನ್ನುತ್ತಲೇ ಅಲ್ಲಿಂದ್ದ ಮಹಿಳಾ ಸ್ಪರ್ಧಿಗಳ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದರು. ಕೊನೆಗೆ ತಮ್ಮ ಹಾಗೆಯೇ ಸ್ಪರ್ಧಿ ಆಗಿ ಭಾಗವಹಿಸಿದ್ದ ಸಿಂಗರ್ ರವಿ ಮರೂರು ಅವರ ಮೇಲೆ ಹಲ್ಲೆ ನಡೆಸಿ, ಅಲ್ಲಿಂದ ಹೊರ ಬಿದ್ದರು. ಆ ಹೊತ್ತಿಗೆ ಬಿಗ್ ಬಾಸ್ ರಿಯಾಲಿಟಿ ಶೋಗೂ ಒಂದಷ್ಟುಟಿ ಆರ್ಪಿ ಬಂದಿತ್ತು. ಜತೆಗೆ ವೆಂಕಟ್ಗೂ ಜನಪ್ರಿಯತೆ ಸಿಕ್ಕಿತ್ತು. ಅದೇ ಪ್ರಚಾರದ ಗುಂಗಿನಲ್ಲಿ ಅಂಬೇಡ್ಕರ್ ಕುರಿತು ವಿವಾದಿತ ಹೇಳಿಕೆ ನೀಡಿ ಜೈಲಿಗೂ ಹೋಗಿ ಬಂದರು. ಅಲ್ಲಿಂದ ಒಂದಷ್ಟುತಣ್ಣಗಾಗಿದ್ದ ಹುಚ್ಚ ವೆಂಕಟ್ ಮತ್ತೆ ಸುದ್ದಿ ಆಗಿದ್ದು ‘ಬಿಗ್ಬಾಸ್' ಸೀಜನ್ 4 ರಲ್ಲಿ .
ಸದ್ಯ ಪ್ರಸಾರವಾಗುತ್ತಿರುವ ಈ ಶೋಗೂ ಮೊನ್ನೆ ಮೊನ್ನೆ ಹೋಗಿ ಬಂದಿದ್ದ ಹುಚ್ಚ ವೆಂಕಟ್, ಅಲ್ಲಿ ಪ್ರಥಮ್ ಮೇಲೂ ಕೈ ಮಾಡಿದರು. ಅದೂ ಕೂಡ ದೊಡ್ಡ ಸುದ್ದಿ ಆಗಿತ್ತು. ಒಂದೆಡೆ ನಿರೂಪಕ ನಟ ಸುದೀಪ್ ತಾವು ಅಲ್ಲಿಗೆ ಹೋಗುವುದಿಲ್ಲ ಎಂದರು. ಮತ್ತೊಂದೆಡೆ ತಾನು ಇರುವುದೇ ಹಾಗೆ ಅಂಥ ಹುಚ್ಚ ವೆಂಕಟ್ ಹೇಳಿಕೆ ನೀಡಿ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಇಂತಹ ವಿಚಿತ್ರ ಮತ್ತು ವಿಲಕ್ಷಣ ಮನಸ್ಥಿತಿಯ ನಟ ಹುಚ್ಚ ವೆಂಕಟ್, ಈಗ ಮತ್ತೊಂದು ರಿಯಾಲಿಟಿ ಶೋಗೆ ಸ್ಪರ್ಧಿ ಆಗಿದ್ದನ್ನು ಹೇಗೆ ಗ್ರಹಿಸಬೇಕು? ನಾಳೆ ಇಲ್ಲಿಯೂ ಇಂತಹ ಹಲ್ಲೆಗಳು ನಡೆದರೆ, ಅದಕ್ಕೆಲ್ಲ ಯಾರು ಹೊಣೆ ? ಎನ್ನುವುದು ವೀಕ್ಷಕರ ಪ್ರಶ್ನೆ. ಅದೇನೆ ಇರಲಿ, ಹುಚ್ಚ ವೆಂಕಟ್ ಮನರಂಜನೆ ವಾಹಿನಿಗಳಿಗೆ ಅನಿವಾರ್ಯವಾಗಿದ್ದು ಯಾಕೆ?
ಶೋನಲ್ಲಿ ಸ್ಪರ್ಧಿಸುವ ಸೂಪರ್ ಜೋಡಿಗಳು
ಹುಚ್ಚ ವೆಂಕಟ್- ರಚನಾ
ಆದಿ ಲೋಕೇಶ್- ಆ್ಯಂಜೆಲೀನಾ
ಆಡೋ ಅಬ್ದುಲ್- ಕೃಪಾ
ಅನಿಲ್- ಸ್ವಾತಿ
ಭಾನು ಪ್ರಕಾಶ್-ಸೌಮ್ಯಾ
ಪ್ರಸನ್ನ- ನಿಶಿತಾ ಗೌಡ
ಅರುಣ್- ಮಾಧುರ್ಯಾ
ವಿಕ್ರಮ್ ಸೂರಿ- ನಮಿತಾ
ಕಾರ್ತಿಕ-ಸಂಗೀತಾ
ಕಾಳಿ ಸ್ವಾಮಿ -ಬಬಿತಾ
(ಕನ್ನಡ ಪ್ರಭ)
