Asianet Suvarna News Asianet Suvarna News

ಮಾಜಿ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಹೃತಿಕ್ ರೋಷನ್

ಪತ್ನಿಗೆ ಭಾವಪೂರ್ಣ ಪತ್ರ ಬರೆದ ಹೃತಿಕ್ ರೋಷನ್ | ಪತ್ನಿ, ಮಕ್ಕಳ ಜೊತೆ ಹಾಲಿಡೇ ಎಂಜಾಯ್ 

Hrithik Roshan writes a heart warming letter to Sussanne
Author
Bengaluru, First Published Nov 26, 2018, 1:26 PM IST

ಬೆಂಗಳೂರು (ನ. 26): ಗಂಡ-ಹೆಂಡತಿ ಸಂಬಂಧ ಮುರಿದು ಬಿದ್ದ ಮೇಲೆ ಒಬ್ಬರಿಗೊಬ್ಬರು ನೋಡುವುದು, ಮಾತನಾಡುವುದು, ಆಗಾಗ ಭೇಟಿ ಮಾಡುವುದು ಇವೆಲ್ಲಾ ಇರುವುದಿಲ್ಲ. ಆದರೆ ಈ ಜೋಡಿ ಸ್ವಲ್ಪ ಡಿಫರೆಂಟು. ದಾಂಪತ್ಯ ಮುರಿದು ಬಿದ್ದ ಮೇಲೆಯೂ ಆಗಾಗ ಸೇರುತ್ತಾರೆ. ಒಟ್ಟಿಗೆ ಔಟಿಂಗ್ ಹೋಗುತ್ತಾರೆ. ಮಕ್ಕಳ ಜೊತೆ ಡಿನ್ನರ್ ಮಾಡುತ್ತಾರೆ. ಒಬ್ಬರಿಗೊಬ್ಬರು ವಿಶ್ ಮಾಡಿಕೊಳ್ಳುತ್ತಾರೆ.

ಹೌದು ಇವರೇ ಹೃತಿಕ್-ಸೂಸಾನ್ ಜೋಡಿಯ ಇಂಟರೆಸ್ಟಿಂಗ್ ಕಥೆ. ಮಾಜಿ ಪತ್ನಿ ಸೂಸಾನ್ ಹಾಗೂ ಮಕ್ಕಳ ಜೊತೆ ಹೃತಿಕ್ ರೋಷನ್ ಹಾಲಿಡೇ ಎಂಜಾಯ್ ಮಾಡಿದ್ದಾರೆ. ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 


ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಹಂಚಿಕೊಂಡ ಹೃತಿಕ್, ಇಲ್ಲಿರುವುದು ನನ್ನ ಮಾಜಿ ಪತ್ನಿ ಹಾಗೂ ನನ್ನ ಆತ್ಮೀಯ ಗೆಳತಿ ಸೂಸಾನ್. ನನ್ನ ಮಕ್ಕಳ ಜೊತೆ ಎಂಜಾಯ್ ಮಾಡುತ್ತಿರುವ ಪೋಟೋಗಳನ್ನು ಸೆರೆ ಹಿಡಿಯುತ್ತಿರುವ ಅದ್ಭುತ ಕ್ಷಣ ಎಂದು ಬರೆದುಕೊಂಡಿದ್ದಾರೆ. 

Hrithik Roshan writes a heart warming letter to Sussanne

 

ಇನ್ನುಮುಂದುವರೆದು, ಇದು ನನ್ನ ಮಕ್ಕಳ ಕಥೆಯನ್ನು ಹೇಳುತ್ತದೆ. ಜಗತ್ತು ನಮ್ಮನ್ನು ಬೇರ್ಪಡಿಸಿರಬಹುದು ಆದರೆ ಒಂದಾಗಿರೋಕೆ ಸಾಧ್ಯ. ನಾವಿಲ್ಲಿ ಒಂದಾಗಿದ್ದೇವೆ. ಇವೆಲ್ಲಾ ಭಾವುಕ ಕ್ಷಣಗಳು ಎಂದು ಹೃತಿಕ್ ಬರೆದುಕೊಂಡಿದ್ದಾರೆ.  

Hrithik Roshan writes a heart warming letter to Sussanne

Follow Us:
Download App:
  • android
  • ios