ಹೃತಿಕ್-ಸೂಸಾನೆ ಒಂದಾಗುತ್ತಿದ್ದಾರಾ?

First Published 30, Jul 2018, 11:26 AM IST
Hrithik Roshan- Sussanne khan to remarry?
Highlights

ಹೃತಿಕ್ ರೋಷನ್ ಹಾಗೂ ಸೂಸಾನೆ ಕಾನ್ ಮತ್ತೊಮ್ಮೆ ಮದುವೆಯಾಗ್ತಾ ಇದ್ದಾರಾ? ಹೀಗೊಂದು ಸುದ್ದಿ ನಿನ್ನೆಯಿಂದ ಹರಿದಾಡ್ತಾ ಇದೆ. ಇದು ನಿಜವಾ? ಇಬ್ಬರೂ ಮದುವೆಯಾಗ್ತಾ ಇದ್ದಾರಾ? 

ಮುಂಬೈ (ಜು. 30): ಹೃತಿಕ್ ರೋಷನ್ ಹಾಗೂ ಸೂಸಾನೆ ಕಾನ್ ಮತ್ತೊಮ್ಮೆ ಮದುವೆಯಾಗ್ತಾ ಇದ್ದಾರಾ? ಹೀಗೊಂದು ಸುದ್ದಿ ನಿನ್ನೆಯಿಂದ ಹರಿದಾಡ್ತಾ ಇದೆ. 

ಬಲ್ಲ ಮೂಲಗಳ ಪ್ರಕಾರ ಇದು ಸುಳ್ಳು ಸುದ್ದಿ. ಹೃತಿಕ್ ಮತ್ತು ಸೂಸಾನೆ ಮತ್ತೆ ಮದುವೆಯಾಗ್ತಾರೆ ಅಂದರೆ ಅದಕ್ಕಿಂತ ಸಂತೋಷ ಬೇರೆ ಏನಿದೆ? ಅವರಿಬ್ಬರು ಉತ್ತಮ ಪೋಷಕರಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಹೃತಿಕ್ ಮತ್ತು ಸೂಸಾನೆ ಸ್ವತಂತ್ರು. ಮುಕ್ತವಾಗಿ ಯೋಚನೆ ಮಾಡುವವರು. ಒಂದು ವೇಳೆ ಅವರಿಬ್ಬರು ಮತ್ತೆ ಒಂದಾಗಬೇಕು ಎನಿಸಿದರೆ ಮತ್ತೆ ಹಿಂದಿರುಗುತ್ತಾರೆ. ಅದನ್ನು ಅವರೇ ನಿರ್ಧರಿಸುತ್ತಾರೆ. ಅಲ್ಲಿಯವರೆಗೆ ಜನ ಇಂತಹ ಸುದ್ದಿಗಳನ್ನು ನಂಬಬಾರದು ಎಂದಿದ್ದಾರೆ. 

ಹೃತಿಕ್ ಮತ್ತು ಸೂಸಾನೆ 2000 ನೇ ಇಸವಿಯಲ್ಲಿ ವಿವಾಹವಾಗಿದ್ದರು. 2014 ರಲ್ಲಿ ವಿಚ್ಚೇದನವಾಗಿದೆ. ಇವರಿಗೆ ರೆಹಾನ್ ಮತ್ತು ರಿದಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು  ಬಾಲಿವುಡ್’ನ ಕ್ಯೂಟ್ ಕಪಲ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.  

loader