ಬೆಂಗಳೂರು (ಜ. 08): ನಟ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಮೊದಲಿನ ಹಂತದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೂಡಾ ಡಯಾಗ್ನೈಸ್ ಗೆ ಒಳಗಾಗಿದ್ದಾರೆ ಎಂದು ಹೃತಿಕ್ ರೋಷನ್ ಹೇಳಿದ್ದಾರೆ. 

ರಾಕೇಶ್ ರೋಷನ್ ಉತ್ತಮ ಜಿಮ್ ಪಟು ಕೂಡಾ ಹೌದು.

 

ಹೃತಿಕ್ ರೋಷನ್ ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಇಂದು ಬೆಳಿಗ್ಗೆ ನನ್ನ ತಂದೆ ಬಳಿ ಫೋಟೋ ಬೇಕೆಂದು ಕೇಳಿದೆ. ಅವರು ಉತ್ತಮ ಜಿಮ್ ಪಟು. ಸರ್ಜರಿ ದಿನವೂ ಜಿಮ್ ಮಿಸ್ ಮಾಡಿಲ್ಲ. ನನಗೆ ಗೊತ್ತಿರುವ ಹಾಗೆ ಅವರು ಗಟ್ಟಿ ಮನುಷ್ಯ. ಕ್ಯಾನ್ಸರ್ ಎಂಬ ಮಹಾಮಾರಿ ವಿರುದ್ಧ ಹೋರಾಡಲು ಅವರು ಸಿದ್ಧರಾಗಿದ್ದಾರೆ. ಅವರಂತ ನಾಯಕನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೇವೆ. ಲವ್ ಯೂ ಡ್ಯಾಡ್ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. 

ರಾಕೇಶ್ ಬೇಗ ಗುಣಮುಖರಾಗಲೆಂದು ಅನೇಕರು ಹಾರೈಸಿದ್ದಾರೆ.