ಹೈದರಾಬಾದ್[ಜು.05]: ಬಾಲಿವುಡ್ ನಟ ಹೃತಿಕ್ ರೋಷನ್ ಪ್ರಚಾರ ರಾಯಭಾರಿಯಾಗಿರುವ ಜಿಮ್ ಸೆಂಟರ್‌ವೊಂದರಲ್ಲಿ ತಮಗೆ ವಂಚನೆ ಎಸಗಲಾಗಿದೆ ಎಂದು ಆರೋಪಿಸಿರುವ ಸ್ಥಳೀಯ ವ್ಯಕ್ತಿಯೊಬ್ಬರು ಹೃತಿಕ್ ರೋಷನ್ ಮತ್ತು ಕಂಪನಿಯ ಮಾಲೀಕರ ವಿರುದ್ಧ ಕೇಸು ದಾಖಲಿಸಿದ್ದಾರೆ.

ಕಲ್ಟ್. ಫಿಟ್ ಜಿಮ್‌ನಲ್ಲಿ ಸೂಕ್ತ ಸಾಮಗ್ರಿಗಳಿಲ್ಲ, ಸರಿಯಾದ ಕ್ರಮದಲ್ಲಿ ತರಬೇತಿ ನೀಡಲಾಗುತ್ತಿಲ್ಲ. ತೂಕ ಇಳಿಕೆ ಪ್ಯಾಕೇಜ್‌ನಲ್ಲಿ 17,490 ರು. ಪಾವತಿಸಿದ್ದೇನೆ.

ಜಿಮ್‌ನಲ್ಲಿ ನಿಗದಿಗಿಂತಲೂ ಅಧಿಕ ಪ್ರಮಾಣದ ಜನರನ್ನು ನೋಂದಾಯಿಸಿಕೊಳ್ಳಲಾಗಿದೆ ಎಂದು ಶಶಿಕಾಂತ್ ಎನ್ನುವವರು ದೂರು ನೀಡಿದ್ದಾರೆ.