ಕ್ರಿಶ್ 4 ಸಿನಿಮಾದ  ಹೀರೋಯಿನ್ ಆಗಿ ,ಈ ಮೊದಲು ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಪರಿಣಿತಿ ಚೋಪ್ರಾ ಹೆಸರುಗಳು ಕೇಳಿ ಬಂದಿದ್ದವು. ಆದರೆ ಈಗ ಹೊಸ ಹೆಸರು ಕೇಳಿ ಬಂದಿದೆ. ಕ್ರಿಶ್ 4ಗೆ ಪ್ರಿಯಾಂಕ ಚೋಪ್ರಾ ಬಣ್ಣ ಹಚ್ಚಲಿದ್ದಾಳೆನ್ನಲಾಗುತ್ತಿದೆ. ಇದು ಅಂತಿಮ ಆಯ್ಕೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಮುಂಬೈ(ನ.19): ಹೃತಿಕ್ ರೋಷನ್ ಅಭಿನಯದ ಕಾಬಿಲ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದರ ಬೆನ್ನಲ್ಲೇ ಕ್ರಿಶ್ 4 ಚಿತ್ರದ ಸಿದ್ಧತೆಗಳು ನಡೆಯುತ್ತಿವೆ.

Add Asianetnews Kannada as a Preferred SourcegooglePreferred

ಕ್ರಿಶ್ 4 ಸಿನಿಮಾದ ಹೀರೋಯಿನ್ ಆಗಿ ,ಈ ಮೊದಲು ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಪರಿಣಿತಿ ಚೋಪ್ರಾ ಹೆಸರುಗಳು ಕೇಳಿ ಬಂದಿದ್ದವು. ಆದರೆ ಈಗ ಹೊಸ ಹೆಸರು ಕೇಳಿ ಬಂದಿದೆ. ಕ್ರಿಶ್ 4ಗೆ ಪ್ರಿಯಾಂಕ ಚೋಪ್ರಾ ಬಣ್ಣ ಹಚ್ಚಲಿದ್ದಾಳೆನ್ನಲಾಗುತ್ತಿದೆ. ಇದು ಅಂತಿಮ ಆಯ್ಕೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಸ್ವತಃ ಹೃತಿಕ್ ರೋಷನ್, ಪ್ರಿಯಾಂಕ ಜೊತೆ ಫೋನ್ ಮಾಡಿ ಮಾತುಕತೆ ನಡೆಸಿದ್ದು, ಇವರಿಬ್ಬರು ಮಾಡಿದ ಎಲ್ಲ ಚಿತ್ರಗಳೂ ಬಾಕ್ಸ್ ಆಫೀಸ್'ನಲ್ಲಿ ಸುಗ್ಗಿ ಮಾಡಿವೆ. ಹಾಗಾಗಿ ಮುಂದಿನ ಚಿತ್ರವನ್ನೂ ಒಟ್ಟಿಗೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಹೃತಿಕ್.