ಜೈಲರ್ 2 ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಐದು ನಿಮಿಷ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ.. ಈ ಐದು ನಿಮಿಷಕ್ಕೆ ಅವರು ಎಷ್ಟು ಕೋಟಿ ಹಣ ಪಡೆದಿದ್ದಾರೆ ಗೊತ್ತಾ?

ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಶಿವಣ್ಣ ಅಭಿನಯದ ಜೈಲರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಮೂರೇ ದಿನಕ್ಕೆ ವಿಶ್ವಾದ್ಯಂತ 317 ಕೋಟಿ ರೂಪಾಯಿ ಗಳಿಸಿದೆ. ಇನ್ನು ಈ ಚಿತ್ರದಲ್ಲಿ ನಟಿಸಿದ ಮತ್ತೊಬ್ಬ ಸ್ಟಾರ್ ಅಂದರೆ ಬಾಲಿವುಡ್‌ನ ಹೃತಿಕ ರೋಷನ್!

ಚಿತ್ರದ ಸಕ್ಸಸ್ ಬೆನ್ನಲ್ಲೇ ಹೃತಿಕ್ ರೋಷನ್ ಪಾತ್ರದ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಹೃತಿಕ್ ರೋಷನ್ ಈ ಚಿತ್ರದಲ್ಲಿ ಕೇವಲ ಐದು ನಿಮಿಷ ಮಾತ್ರ ಆಕ್ಟ್ ಮಾಡಿದ್ದಾರೆ. ಅತಿಥಿ ಪಾತ್ರದಲ್ಲಿ ಹೃತಿಕ್ ರೋಷನ್ ಮಿಂಚಿ ಚಿತ್ರದಲ್ಲಿ ಮರೆಯಾಗಿದ್ದಾರೆ. ವಿಷಯ ಅದಲ್ಲ, ಕೇವಲ ಐದು ನಿಮಿಷದ ಪಾತ್ರಕ್ಕೆ ಅವರು ಪಡೆದುಕೊಂಡಿರುವ ಸಂಭಾವನೆ.

ಹೃತಿಕ್ ರೋಷನ್ ಸಿನಿಮಾ ಶೂಟಿಂಗ್ ವೇಳೆ ಕೇವಲ ಎರಡು ದಿನ ಮಾತ್ರ ಸೆಟ್‌ಗೆ ಬಂದಿದ್ದರು. ತಮ್ಮ ಐದು ನಿಮಿಷಗಳ ಅಭಿನಯಕ್ಕಾಗಿ 20ಕೋಟಿಗೂ ಅಧಿಕ ಹಣ ಪಡೆದುಕೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ಬೆನ್ನಲ್ಲೇ.. ಇಷ್ಟು ಕಡಿಮೆ ಸ್ಕ್ರೀನ್ ಟೈಮ್‌ಗೆ ಹೆಚ್ಚಿನ ಸಂಭಾವನೆ ಪಡೆದ ಕಲಾವಿದರಲ್ಲಿ ಹೃತಿಕ್ ರೋಷನ್ ಒಬ್ಬರು.

ಆದರೆ ಸಿನಿಮಾ ತಂಡ ಅವರಿಗೆ ಎಷ್ಟು ಹಣ ನೀಡಲಾಗಿದೆ ಅನ್ನೋದನ್ನು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ಚಿತ್ರದಲ್ಲಿ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ರಮ್ಯಾ ಕೃಷ್ಣ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಮಿಥುನ್ ಚಕ್ರವರ್ತಿ, ಮೋಹನ್ ಲಾಲ್, ಶಿವ ರಾಜ್‌ಕುಮಾರ್ ಮತ್ತು ಇತರರು ಚಿತ್ರದ ಭಾಗವಾಗಿದ್ದಾರೆ.

ಜೈಲರ್-2 ಆಕ್ಷನ್ ಚಿತ್ರ. ಈ ಹಿಂದೆ ಬಿಡುಗಡೆಯಾದ ಜೈಲರ್ ಚಿತ್ರದ ಮುಂದುವರಿದ ಭಾಗ. ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಅಕ್ಟೋಬರ್ 15 ರಂದು ದೇಶದಾದ್ಯಂತ ತೆರೆ ಕಂಡಿದೆ. ಇನ್ನು, ಜೈಲರ್ ಟು ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ತಮಿಳು ಮಾತ್ರವಲ್ಲದೇ ದಕ್ಞಿಣ ಭಾರತದ ಎಲ್ಲಾ ಭಾಷೆಗಳು ಹಾಗೂ ಹಿಂದಿಯಲ್ಲಿ ಮೂಡಿ ಬಂದಿದೆ.

ಮೂರೇ ದಿನಕ್ಕೆ 317 ಕೋಟಿ ಕ್ಲಬ್

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕ್ರೇಜ್ ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಸಾಬೀತಾಗಿದೆ. ರಜನಿಕಾಂತ್ ಅವರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ‘ಜೈಲರ್ 2’ ನಾಲ್ಕನೇ ಸ್ಥಾನಕ್ಕೇರಿದೆ ಎನ್ನಲಾಗಿದೆ. ಸುಮಾರು ₹668–675 ಕೋಟಿ ಗಳಿಸಿರುವ ‘2.0’ ಮೊದಲ ಸ್ಥಾನದಲ್ಲಿದ್ದರೆ, ‘ಜೈಲರ್’ ₹605–630 ಕೋಟಿ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ‘ಕೂಲಿ’ ಚಿತ್ರವು ಸುಮಾರು ₹516.7–548 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.

ಈ ಸಾಧನೆಯೊಂದಿಗೆ ರಜನಿಕಾಂತ್ ಅವರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ‘ಜೈಲರ್ 2’ ನಾಲ್ಕನೇ ಸ್ಥಾನಕ್ಕೇರಿದೆ ಎನ್ನಲಾಗಿದೆ. ಸುಮಾರು ₹668–675 ಕೋಟಿ ಗಳಿಸಿರುವ ‘2.0’ ಮೊದಲ ಸ್ಥಾನದಲ್ಲಿದ್ದರೆ, ‘ಜೈಲರ್’ ₹605–630 ಕೋಟಿ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ‘ಕೂಲಿ’ ಚಿತ್ರವು ಸುಮಾರು ₹516.7–548 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.