ವಿಚ್ಛೇದನ ಪಡೆದು ಬೇರೆಯಾದರೂ, ಉತ್ತಮ ಬಾಂಧವ್ಯ ಹೊಂದಿದ್ದಾರೆ ಹೃತಿಕ್ ಹಾಗೂ ಮಾಜಿ ಪತ್ನಿ ಸೂಸೇನ್. ಮಾಜಿ ಪತಿಯ ಹುಟ್ಟುಹಬ್ಬಕ್ಕೆ ಆಕೆ ವಿಶ್ ಮಾಡಿದ್ದು ಹೇಗೆ ಗೊತ್ತಾ?

ಮುಂಬಯಿ: ಸುಮಾರು ಹಾದಿನಾಲ್ಕು ವರ್ಷಗಳ ದಾಂಪತ್ಯ ಜೀವನ ನಡೆಸಿ, ಎರಡು ಮುದ್ದಾದ ಮಕ್ಕಳ ಪೋಷಕರಾಗಿ ಹೃತಿಕ್ ರೋಷನ್ ಹಾಗೂ ಪತ್ನಿ ಸುಸೇನ್ ಖಾನ್ ವಿಚ್ಛೇದನ ಪಡೆದು ಬೇರೆಯಾಗಿದ್ದಾರೆ. ಆದರೆ, ಜತೆಯಾಗಿ ಸುತ್ತೋದು, ಒಬ್ಬರ ಹುಟ್ಟುಹಬ್ಬಕ್ಕೆ ಮತ್ತೊಬ್ಬರು ಹೃದಯಪೂರ್ವಕವಾಗಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಇವರ ಜೀವನದಲ್ಲಿ ಕಾಮನ್. 

ಇಂದು ಹೃತಿಕ್ ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಸೂಸೇನ್, 'ಎಂದಿಗೂ, ಎಂದೆಂದಿಗೂ ನನ್ನ ಬಾಳಿನ ಬೆಳಕು...' ಎಂದು ಹೇಳಿ, ಮಾಜಿ ಪತಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. 

View post on Instagram

ಹೊಸ ವರ್ಷಾಚರಣೆಗೆ ಮಕ್ಕಳೊಂದಿಗೆ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾಗ ತೆಗೆದ ಫೋಟೋವೊಂದನ್ನು ಪೋಸ್ಟ್ ಮಾಡಿ, ಸುಸೇನ್ ಮಾಜಿ ಪತಿಗೆ ವಿಶ್ ಮಾಡಿದ್ದು, 102,972 ಲೈಕ್ಸ್ ಬಂದಿವೆ.

ಒಂದು ಕಾಲದಲ್ಲಿ ಬಾಲಿವುಡ್‌ನ ಕ್ಯೂಟ್ ಕಪಲ್ಸ್ ಎಂದೇ ಖ್ಯಾತವಾಗಿದ್ದ ಈ ಜೋಡಿ, ಬೇರೆಯಾದ ನಂತರವೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆಗಾಗ ಜತೆಯಾಗಿಯೇ, ಮಕ್ಕಳೊಂದಿಗೆ ವಿದೇಶಿ ಪ್ರವಾಸಗಳನ್ನು ಕೈಗೊಳ್ಳುತ್ತಾರೆ. ಇಷ್ಟೆಲ್ಲ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವುದು ಸಾಧ್ಯವಿದೆ ಎಂದಾಗ, ಜತೆಯಾಗಿಯೇ ಏಕಿರಬಾರದು ಎಂಬುವುದು ಅಭಿಮಾನಿಗಳ ಪ್ರಶ್ನೆ.

View post on Instagram