ಕಾಕ್ ಟೇಲ್ ಚಿತ್ರದ 'ಅಂಗ್ರೇಜಿ ಬೀಟ್' ಹಾಡಿನ ಮೂಲಕ ರಾತ್ರಿ ಬೆಳಗಾಗುವುದರೊಳಗೆ ದಾಖಲೆ ನಿರ್ಮಿಸಿದ ಸಿಂಗರ್, ರ್ಯಾಪರ್ ಹನಿಸಿಂಗ್ ಈಗ ಅಂತದ್ದೇ ಇನ್ನೊಂದು ದಾಖಲೆ ಬರೆದಿದ್ದಾರೆ. ಅವರು ಹಾಡಿರುವ ‘ಧೀರೇ ಧೀರೇ ಸೇ’ ಹಾಡನ್ನು 200 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಯ್ಯೂಟ್ಯೂಬ್ ನಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ.
ನವದೆಹಲಿ (ಫೆ.18): ಕಾಕ್ ಟೇಲ್ ಚಿತ್ರದ 'ಅಂಗ್ರೇಜಿ ಬೀಟ್' ಹಾಡಿನ ಮೂಲಕ ರಾತ್ರಿ ಬೆಳಗಾಗುವುದರೊಳಗೆ ದಾಖಲೆ ನಿರ್ಮಿಸಿದ ಸಿಂಗರ್, ರ್ಯಾಪರ್ ಹನಿಸಿಂಗ್ ಈಗ ಅಂತದ್ದೇ ಇನ್ನೊಂದು ದಾಖಲೆ ಬರೆದಿದ್ದಾರೆ. ಅವರು ಹಾಡಿರುವ ‘ಧೀರೇ ಧೀರೇ ಸೇ’ ಹಾಡನ್ನು 200 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಯ್ಯೂಟ್ಯೂಬ್ ನಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ.
'ಧೀರೇ ಧೀರೇ ಸೇ' ಯ್ಯೂಟ್ಯೂಬ್ ನಲ್ಲಿ 200 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ ಭಾರತದ ಮೊದಲ ಹಾಡು ಎಂಬ ದಾಖಲೆ ನಿರ್ಮಿಸಿದೆ. "ಎಲ್ಲಾ ರೀತಿಯ ಪ್ರೀತಿ, ಮಮತೆ, ವಾತ್ಸಲ್ಯದಿಂದ ನಾನು ಭಾವಪರವಶನಾಗುತ್ತೇನೆ. ಧೀರೇ ಧೀರೇ ಸೇ ಹಾಡಿನಲ್ಲಿ ಈ ಎಲ್ಲವನ್ನು ನಾನು ಪಡೆದಿದ್ದೇನೆ. ಇದರಲ್ಲಿ ನನ್ನ ಹೆಚ್ಚಿನ ಶ್ರಮ ಅಡಗಿದೆ ಮತ್ತು ಈ ಹಾಡನ್ನು ಮೆಚ್ಚಿಕೊಂಡ ಮಿಲಿಯಾಂತರ ಹೃದಯಗಳಿಗೆ ನಾನು ಋಣಿ" ಎಂದು ಹನಿಸಿಂಗ್ ಹೇಳಿದ್ದಾರೆ.
