ಭಾರತೀಯ ಸಂಸ್ಕೃತಿ, ಜನರ ಪ್ರೀತಿ ಹಾಗೂ ಇಲ್ಲಿನ ಆಹಾರಕ್ಕೆ ಮಾರು ಹೋಗುವವರೇ ಜಾಸ್ತಿ. ವಿದೇಶಿ ಸೆಲೆಬ್ರಿಟಿಗಳಿಗೂ ಇಂಡಿಯಾ ಮೇಲೆ ಎಲ್ಲಿಲ್ಲದ ಕಾಳಜಿ ಹಾಗೂ ಪ್ರೀತಿ. ಸಿನಿ ತಾರೆಯರು, ಕ್ರಿಕೆಟಿಗರು ಹಾಗೂ ರಾಜಕಾರಣಿಗಳೂ ಎಲ್ಲರೂ ತಮ್ಮ ಮಕ್ಕಳಿಗೆ ಇಂಡಿಯಾ ಎಂದು ಹೆಸರಿಡಲು ಇಷ್ಟ ಪಡುತ್ತಾರೆ.

 

ಎವೆಂಜರ್ಸ್‌ ಫೇಮ್‌ ಕ್ರಿಸ್ ಹೆಮ್ಸ್ ವರ್ಥ್‌ಗೆ ಭಾರತದ ಮೇಲಿರುವ ಪ್ರೀತಿ ಹಾಗೂ ಗೌರವದಿಂದ ತನ್ನ ಮಗಳಿಗೆ 'ಇಂಡಿಯಾ' ಹೆಸರನ್ನು ಇಟ್ಟಿದ್ದಾರೆ.

ಆಹಾರ ಕೊಡದೆ ನಾರಾಯಣ ಮೂರ್ತಿಗೆ ಹಿಂಸೆ ನೀಡಿದ ಸಿಬ್ಬಂದಿ!

ಇವರಿಗೇಕೆ ಇಂಡಿಯಾ ಮೇಲೆ ಇಷ್ಟೊಂದು ಪ್ರೀತಿ? ಮತ್ತ್ಯಾವ ದೇಶದ ಮೇಲೂ ಇಲ್ಲವಾ ಎಂದು ಅನುಮಾನ ಹುಟ್ಟುವುದು ಸಹಜ! ಅದಕ್ಕೆ ಕ್ರಿಸ್ ಹೆಮ್ಸ್ ಅವರು ಒಮ್ಮೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

 

ಕ್ರಿಸ್ ಹೆಮ್ಸ್ 'ಧಾಕಾ' ಶೂಟಿಂಗ್‌ಗಾಗಿ ಭಾರತಕ್ಕೆ ಆಗಮಿಸಿದ್ದರು. ಅಹಮದಾಬಾದ್ ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ. ಶೂಟಿಂಗ್ ನೋಡಲು ಆಗಮಿಸಿದ ಜನರು ತೋರಿಸಿದ ಪ್ರೀತಿ , ಗೌರವಕ್ಕೆ ಹೆಮ್ಸ್ ಫುಲ್ ಫಿದಾ ಆಗಿದ್ದಾರೆ.ಹಾಗಾಗಿ ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದಾರೆ.

SSLCಯಲ್ಲೇ ಲವ್ವಲ್ಲಿ ಬಿದ್ದು ಬ್ರೇಕಪ್ ಮಾಡಿಕೊಂಡ ನಟಿ!

ಸೌತ್ ಆಫ್ರಿಕಾ ಆಟಗಾರ ಜಾಂಟಿ ರೋಡ್ಸ್ ಕೂಡಾ ತಮ್ಮ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದರು.