10 ನೇ ತರಗತಿಯಲ್ಲಿ ಲವ್ ಆ್ಯಂಡ್ ಬ್ರೇಕ್‌ ಅಪ್‌ ಆದ ನಟಿ ಬೇರೆ ಯಾರು ಅಲ್ಲ ಅದುವೇ ಬಾಲಿವುಡ್‌ನಲ್ಲಿ ಸಖತ್‌ ಸುದ್ದಿ ಮಾಡಿರುವ 'ಲಸ್ಟ್‌ ಸ್ಟೋರಿಸ್‌' ಚಿತ್ರದ ನಟಿ ಕಿಯಾರ ಅಡ್ವಾಣಿ. ಒಂದು ಆ್ಯಂಗಲ್ ನಿಂದ ನೋಡಿದ್ರೆ ಥೇಟ್‌ ಮಾಧುರಿ ದೀಕ್ಷಿತ್‌ಳಂತೆ ಕಾಣ್ತಾರೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ.

ಕಿಯಾರ ಫಿಟ್‌ನೆಸ್ ರಹಸ್ಯ

 

'ನಾನು 10 ನೇ ತರಗತಿಯಲ್ಲಿದ್ದಾಗ ಮೊದಲ ಲವ್ ಮೊದಲ ಅಫೇರ್ ಶುರುವಾಯ್ತು. ಆದರೆ ಅಮ್ಮನಿಗೆ ನಾನು ಸರಿಯಾಗಿ ಓದುತ್ತಿಲ್ಲವೆಂದು ಗಮನಕ್ಕೆ ಬಂತು. ಬೈದ್ರು. ಆ ಕಾರಣಕ್ಕೆ ಬ್ರೇಕ್ ಅಪ್ ಮಾಡಿಕೊಂಡೆವು' ಎಂದು ಪ್ರಮೋಷನ್‌ನಲ್ಲಿ ಹೇಳಿಕೊಂಡಿದ್ದಾರೆ.

ನಟಿಯಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಗಾಸಿಪ್ ಸುದ್ದಿಗಳಿಗೆ ಕೊಂಚ ಬೇಸರ ಮಾಡಿಕೊಳ್ಳುತ್ತಿದ್ದ ಕಿಯಾರ ನೋಡ ನೋಡುತ್ತಾ ಇದೆಲ್ಲಾ ಮಾಮೂಲಿ ಎಂದು ಸ್ಟ್ರಾಂಗ್‌ ಆದರಂತೆ.

ಮೊಮ್ಮಗಳು ಕಿಯಾರಾ ಜತೆ ಕುಳಿತು ಅಜ್ಜಿ ನೋಡಿದ್ರು ಆ ಸೀನ್!

ತಮಿಳು ಖ್ಯಾತ ಚಿತ್ರ 'ಅರ್ಜುನ್‌ ರೆಡ್ಡಿ' ರಿಮೇಕ್‌ ಆಗಿ ಹಿಂದಿಯಲ್ಲಿ 'ಕಬೀರ್ ಸಿಂಗ್' ಎಂದು ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ರೋಮ್ಯಾನ್ಸ್ ಹೆಚ್ಚಿದ್ದು ಕಿಯಾರ ಹಾಗೂ ಶಾಹಿದ್ ಕಪೂರ್ ಸಿಕ್ಕಾಪಟ್ಟೆ ಇಂಟಿಮೇಟ್ ಆಗಿ ಕಾಣಿಸಿಕೊಂಡಿದ್ದಾರೆ.