ಈ ನಟನನ್ನು ವರಿಸಲಿದ್ದಾಳೆ ಸಿಹಿ-ಕಹಿ ಚಂದ್ರು ಮಗಳು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Feb 2019, 4:35 PM IST
Hitha Chandrashekar to tie knot with Kiran Srinivas
Highlights

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ 'ಒಂಥರಾ ಬಣ್ಣಗಳು' ಖ್ಯಾತಿಯ ಹಿತಾ ಚಂದ್ರಶೇಖರ್. ವರನಾರು? ಯವಾಗಂತೆ ಮದುವೆ? ಓದಿ ಈ ಸುದ್ದಿ...

'ಒಂಥರಾ ಬಣ್ಣಗಳು' ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಹಿತಾ ಚಂದ್ರಶೇಖರ್ ಹಾಗೂ ಕರಣ್ ಜೋಡಿ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಅತ್ತ ಕಿರುತೆರೆ ಫೇಮಸ್ ಜೋಡಿ ಮಿ. ಆ್ಯಂಡ್ ಮಿಸ್ಟರ್ ರಂಗೇಗೌಡ ಖ್ಯಾತಿಯ ಅಮೃತಾ ಮತ್ತು ರಘು ದಾಂಪತ್ಯಕ್ಕೆ ಕಾಲಿಡಲು ನಿರ್ಧರಿಸಿದರೆ, ಇತ್ತ ಈ ಜೋಡಿ ಮದುವೆಯಾಗುತ್ತಿರುವ ಸುದ್ದಿ ಬ್ರೇಕ್ ಆಗಿದೆ. ಆ ಮೂಲಕ ಮತ್ತೊಂದು ಸ್ಯಾಂಡಲ್‌ವುಡ್ ಜೋಡಿ ನಿಜ ಜೀವನದಲ್ಲಿಯೂ ಒಂದಾಗುತ್ತಿದೆ.

 

ಸ್ಯಾಂಡಲ್‌ವುಡ್‌ನ ಹಿರಿಯ ನಟ, ಕಾಮಿಡಿಯನ್ ಹಾಗೂ ಮಾಸ್ಟರ್ ಶೆಫ್ ಸಿಹಿ-ಕಹಿ ಚಂದ್ರು ಹಾಗೂ ಗೀತಾಳ ಹಿರಿಯ ಮಗಳು ಹಿತಾ. 'ಹಾಗೆ ಸುಮ್ಮನೆ..' ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚಾಕೋಲೇಟ್ ಬಾಯ್ ಕಿರಣ್.

ಸೋಷಿಯಲ್ ಮೀಡಿಯಾದಲ್ಲಿ ಹಿತಾ ಸಿಕ್ಕಾಪಟ್ಟೆ ಆ್ಯಕ್ಟಿವ್. 'ಆಂಟಿಥಾ' ಎಂಬ ಫನ್ನಿ ವೀಡಿಯೋ ಮಾಡಿ, ಪೋಸ್ಟ್ ಮಾಡಿಯೇ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದಾರೆ.

ಕಿರಣ್ ಹಾಗೂ ಹಿತಾಗೆ ಈಗಾಗಲೇ ಮನೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೆಲವು ದಿನಗಳ ಹಿಂದೆ ಇವರಿಬ್ಬರೊಂದಿಗೆ ನಟಿಸಿರುವ ಸೋನು ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಜೋಡಿಯ ಫೋಟೋ ಹಾಕಿ, 'ಯಸ್, ಈ ಜೋಡಿ ಡೇಟಿಂಗ್ ಮಾಡುತ್ತಿರುವುದು ಹೌದು. ಶೀಘ್ರವೇ ಹಸೆಮಣೆ ಏರಲಿದೆ...' ಎಂದು ಬರೆದುಕೊಂಡಿದ್ದರು. ಸೋನುವಿನಿಂದಲೇ ಈ ಸುದ್ದಿ ಬ್ರೇಕ್ ಆದಂತಾಗಿದೆ.

loader