ಮಠ, ಎದ್ದೇಳು ಮಂಜುನಾಥ ಜೋಡಿಯನ್ನು ಒಂದಾಗಿಸಿದ 'ರಂಗನಾಯಕ'!
ಕೊನೆಗೂ ಜಗ್ಗೇಶ್ ಹಾಗೂ ಮಠ ಗುರುಪ್ರಸಾದ್ ಮತ್ತೆ ಜತೆಯಾಗಿದ್ದಾರೆ. ಹತ್ತು ವರ್ಷಗಳ ನಂತರ ಜತೆಯಾಗಿರುವ ಈ ಜೋಡಿ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರುತ್ತಿರುವುದು ಖಚಿತವಾಗಿದೆ. ಚಿತ್ರಕ್ಕೆ ‘ರಂಗನಾಯಕ’ ಎನ್ನುವ ಹೆಸರು ಇಡಲಾಗಿದೆ.
ದಸರಾ ಹಬ್ಬಕ್ಕೆ ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ. ಅಲ್ಲಿಗೆ ಮಠ ಗುರುಪ್ರಸಾದ್ ಈ ಬಾರಿ ಸಿಕ್ಕಾಪಟ್ಟೆಫಾಸ್ಟ್ ಆಗಿಯೇ ಸಿನಿಮಾ ಮುಗಿಸುವ ಸಾಹಸ ಮಾಡುತ್ತಿದ್ದಾರೆ ಎನ್ನುವ ಸೂಚನೆ ಕೊಟ್ಟಿದ್ದಾರೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮೈಸೂರಿನಲ್ಲಿ ಟಾಂಗಾ ಸವಾರಿ ಮಾಡಿದ ಜಗ್ಗೇಶ್
ಚಿತ್ರದ ತಾರಾಗಣ, ಚಿತ್ರದ ನಾಯಕಿ ಸೇರಿದಂತೆ ಎಲ್ಲವೂ ಇನ್ನಷ್ಟೆಆಯ್ಕೆ ಆಗಬೇಕಿದೆ. ಆದರೆ, ಚಿತ್ರದ ಹೆಸರು ನೋಡಿದರೆ ಎಂದಿನಂತೆ ಇದು ಗುರು ಪ್ರಸಾದ್ ಸ್ಟೈಲಿನ ಸಿನಿಮಾ, ಮನರಂಜನೆಯೇ ಚಿತ್ರದ ಹೈಲೈಟ್ ಎಂಬುದರಲ್ಲಿ ಅನುಮಾನವಿಲ್ಲ ಎನ್ನುತ್ತಿದೆ ಚಿತ್ರತಂಡ. ‘ರಂಗನಾಯಕ’ ಚಿತ್ರವನ್ನು ನಿರ್ಮಿಸುತ್ತಿರುವುದು ಎ ಆರ್ ವಿಖ್ಯಾತ್. ‘ಪುಷ್ಪಕ ವಿಮಾನ’ ಹಾಗೂ ಇನ್ನೂ ತೆರೆಗೆ ಬರಬೇಕಿರುವ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್‌ಪೆಕ್ಟರ್ ವಿಕ್ರಮ್’ ಚಿತ್ರಗಳ ನಂತರ ವಿಖ್ಯಾತ್ ಅವರ ಸೋಲೋ ನಿರ್ಮಾಣದ ಚಿತ್ರವಿದು.
ಬಿಡುಗಡೆಗೂ ಮುನ್ನವೇ ತೋತಾಪುರಿ ಹೊಸ ದಾಖಲೆ!
‘ಗುರುಪ್ರಸಾದ್ ಅವರು ಬಂದು ಕತೆ ಹೇಳಿದಾಗ ತುಂಬಾ ಚೆನ್ನಾಗಿದೆ ಅನಿಸಿತು. ಈಗಾಗಲೇ ಜಗ್ಗೇಶ್ ಹಾಗೂ ಗುರು ಅವರ ಕಾಂಬಿನೇಷನ್‌ನಲ್ಲಿ ಮಠ, ಎದ್ದೇಳು ಮಂಜುನಾಥ ಸಿನಿಮಾಗಳು ಬಂದು ಗೆದ್ದಿವೆ. ಈಗ ನಮ್ಮ ಬ್ಯಾನರ್‌ನಲ್ಲಿ ಅವರು ಹ್ಯಾಟ್ರಿಕ್ ಸಿನಿಮಾ ಮಾಡಲಿದ್ದಾರೆ ಎನ್ನುವ ನಂಬಿಕೆ ಇದೆ. ಜಗ್ಗೇಶ್ ಅವರಿಗೆ ತುಂಬಾ ಸೂಕ್ತವಾದ ಕತೆಯನ್ನೇ ಮಾಡಿಕೊಂಡಿದ್ದಾರೆ. ಮಜಾವಾಗಿರುವ ಸಿನಿಮಾ ಇದು’ ಎಂಬುದು ವಿಖ್ಯಾತ್ ಮಾತು.
ಜಗ್ಗೇಶ್ ಹೇಳಿದ ಮಾತನ್ನು ಪ್ರೂವ್ ಮಾಡಿ ತೊಡೆ ತಟ್ಟಿದ ಡಿ-ಬಾಸ್!