ಬಾಲಿವುಡ್ ಹಾಗೂ ಟಾಲಿವುಡ್ ನಿರ್ದೇಶಕರಿಗೆ ಬೇಡಿಕೆ ಹೆಚ್ಚಾದಂತೆ, ಸ್ಯಾಂಡಲ್'ವುಡ್ ನಿರ್ದೇಶಕರಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸಿದ್ಲಿಂಗು ಹಾಗೂ ನೀರ್ ದೋಸೆ ಸಿನಿಮಾಗಳ ಎಫೆಕ್ಟ್ ನಿಂದ ನಿರ್ದೇಶಕ ವಿಜಯ ಪ್ರಸಾದ್ ಗೆ ಬೇಡಿಕೆ ಹೆಚ್ಚಾಗಿದೆ.

ಬೆಂಗಳೂರು(ಅ.25): ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರಂತೆ ಡೈರೆಕ್ಟರ್ ಕೂಡ ಕೋಟಿ ಸಂಭಾವನೆ ತೆಗೆದುಕೊಳ್ಳುವ ನಿರ್ದೇಶಕರಿಗೆ ಡಿಮ್ಯಾಂಡ್ ಹೆಚ್ಚಾಗಿದೆ.

ಬಾಲಿವುಡ್ ಹಾಗೂ ಟಾಲಿವುಡ್ ನಿರ್ದೇಶಕರಿಗೆ ಬೇಡಿಕೆ ಹೆಚ್ಚಾದಂತೆ, ಸ್ಯಾಂಡಲ್'ವುಡ್ ನಿರ್ದೇಶಕರಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸಿದ್ಲಿಂಗು ಹಾಗೂ ನೀರ್ ದೋಸೆ ಸಿನಿಮಾಗಳ ಎಫೆಕ್ಟ್ ನಿಂದ ನಿರ್ದೇಶಕ ವಿಜಯ ಪ್ರಸಾದ್ ಗೆ ಬೇಡಿಕೆ ಹೆಚ್ಚಾಗಿದೆ. ಅವರು ಎರಡು ಹಿಟ್ ಸಿನಿಮಾಗಳ ನಂತರ ಈಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಒಂದು ಸಿನಿಮಾ ನಿರ್ದೇಶನ ಮಾಡೋದಿಕ್ಕೆ ವಿಜಯಪ್ರಸಾದ್ ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

ದುನಿಯಾ ಸೂರಿಗೆ ಕೋಡಬೇಕು ಕೋಟಿಗೂ ಹೆಚ್ಚು

ದುನಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಎಬ್ಬಿಸಿದ ನಿರ್ದೇಶಕ ಸೂರಿ. ವಿಭಿನ್ನ ಬಗೆಯ ಚಿತ್ರಗಳನ್ನ ಮಾಡ್ತಾ ಇರೋ ಸೂರಿ ಕೂಡ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ದೊಡ್ಮನೆ ಹುಡ್ಗ ಸಕ್ಸಸ್ ಖುಷಿಯಲ್ಲಿರೋ ನಿರ್ದೇಶಕ ಸೂರಿ ಒಂದ ಸಿನಿಮಾಕ್ಕೆ ಒಂದು ಕೋಟಿಯಿಂದ ಒಂದುವರೆ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ನಂ .1 ಸ್ಥಾನ ಕೃಷ್ಣ ಅವರಿಗೆ

ಗಜ ಕೇಸರಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾದ ಕ್ಯಾಮರಮೆನ್ ಕೃಷ್ಣ ಕೂಡ ಸಂಭಾವನೆಯನ್ನು ಜಾಸ್ತಿ ಮಾಡಿ ಕೊಂಡಿದ್ದಾರೆ. ಸದ್ಯ ಹೆಬ್ಬುಲಿ ಚಿತ್ರವನ್ನು ನಿರ್ದೇಶನ ಮಾಡ್ತಿರೋ ನಿರ್ದೇಶಕ ಕೃಷ್ಣ ಕ್ಯಾಮೆರಾ ಕೆಲಸ ಹಾಗೂ ನಿರ್ದೇಶನ ಸೇರಿ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ನಂದ ಕಿಶೋರ್ ಕೋಡಬೇಕು ಒಂದುವರೆ ಕೋಟಿ

ಗಾಂಧಿನಗರದಲ್ಲಿ ಬ್ಯಾಕ್ ಟೂ ಬ್ಯಾಕ್ ಹಿಟ್ ಕೋಡ್ತಾ ಇರೋ ನಿರ್ದೇಶಕ ಅಂದರೆ ನಂದ ಕಿಶೋರ್. ವಿಕ್ಟರಿ, ಅಧ್ಯಕ್ಷ, ರನ್ನದಂತ ಹಿಟ್ ಚಿತ್ರಗಳನ್ನ ಕೊಟ್ಟಿರೋ ನಿರ್ದೇಶಕ ನಂದ ಕಿಶೋರ್, ನಿರ್ದೇಶನ ಹಾಗೂ ಡೈರೆಕ್ಷನ್ ಡಿರ್ಪಾಂಟ್ ಮೆಂಟ್ ಸೇರಿ ಒಂದುವರೆ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

Click Here : ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವ ಪ್ರೇಮಿಗಳೆ ಎಚ್ಚರ

ಪವನ್ ಗೆ ಕೋಡಬೇಕು ಲಕ್ಷ, ಲಕ್ಷ

ಗೋವಿಂದಾಯ ನಮಃ ಚಿತ್ರದ ಮೂಲಕ ಸದ್ದು ಮಾಡಿದ ನಿರ್ದೇಶಕ ಪವನ್ ಒಡೆಯರ್. ಸದ್ಯಕ್ಕೆ ನಟರಾಜ ಸವೀಸ್ ಚಿತ್ರದ ಜಪ ಮಾಡ್ತಾ ಇರೋ ಪವನ್ ಒಡೆಯರ್ ಒಂದು ಸಿನಿಮಾ ಡೈರೆಕ್ಷನ್ ಮಾಡೋದಿಕ್ಕೆ 70ರಿಂದ 80 ಲಕ್ಷ ಪಡೆಯುತ್ತಾರಂತೆ.

ಒಟ್ಟಿನಲ್ಲಿ ಬೇರೆ ಭಾಷೆಯಲ್ಲಿರೋ ಸ್ಟಾರ್ ಡೈರೆಕ್ಟರ್'ಗಳಂತೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಮೇಕರ್ಸ್ ಇದ್ದಾರೆ ಅನ್ನೋದಿಕ್ಕೆ ಈ ಟಾಪ್ 5 ಡೈರೆಕ್ಟರ್ ಗಳೇ ಸಾಕ್ಷಿ.

ವರದಿ: ರವಿಕುಮಾರ್ ಎಂ.ಕೆ., ಸುವರ್ಣ ನ್ಯೂಸ್