'ಅಬ್ ಲಂಚ್ ತುಮ್ ಆಮೇಲ್ ಆನಾ..' ಬ್ಯಾಂಕ್‌ನಲ್ಲಿ ಹೀಗ್ ಮಾತಾಡಿ ಕೆಲ್ಸ ಪಡ್ಕೊಂಡ ನಂದಿನಿ!
ಸೋಶಿಯಲ್ ಮೀಡಿಯಾದಲ್ಲಿ ನಾನು ನಂದಿನಿ ಹಾಡಿನ ಮೂಲಕ ಸಖತ್ ಪ್ರಖ್ಯಾತಿ ಪಡೆದುಕೊಂಡಿದ್ದ ವಿಕಿಪೆಡಿಯಾ ವಿಕಾಸ್ ಈಗ ಮತ್ತೊಂದು ವಿಡಿಯೋ ಮೂಲಕ ಗಮನಸೆಳೆದಿದ್ದಾರೆ.
ಬೆಂಗಳೂರು (ಡಿ.30): ನಾನು ನಂದಿನಿ, ಬೆಂಗ್ಳೂರ್‌ಗೆ ಬಂದಿನಿ ಹಾಡಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮಿಂಚು ಹರಿಸಿದ್ದ ಕಂಟೆಂಟ್ ಕ್ರಿಯೇಟರ್ ವಿಕಿ ಪೆಡಿಯಾ (vicky pedia) ಅಲಿಯಾಸ್ ವಿಕಾಸ್ ಈಗ ಹೊಸ ವಿಡಿಯೋ ಮೂಲಕ ಮತ್ತೊಂದು ಸುತ್ತಿನ ಗಮನಸೆಳೆದಿದ್ದಾರೆ. ಈ ಬಾರಿ ಕರ್ನಾಟಕದಲ್ಲಿನ ಬ್ಯಾಂಕುಗಳಲ್ಲಿನ ಪರಿಸ್ಥಿತಿಗಳ ಬಗ್ಗೆ ಅವರ ಮಾಡಿರುವ ತಮಾಷೆಯ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಕನ್ನಡ ನಾಮಫಲಕ ಹೋರಾಟ ತೀವ್ರವಾಗಿರುವ ಹೊತ್ತಿನಲ್ಲಿ, ರಾಜ್ಯದಲ್ಲಿರುವ ಕೆಲ್ಲಾ ಕಂಪನಿಗಳು ಕನ್ನಡದಲ್ಲಿಯೇ ಸೇವೆ ನೀಡಬೇಕು ಎನ್ನುವ ಆಗ್ರಹ ತೀವ್ರವಾಗಿರುವ ಹೊತ್ತಿನಲ್ಲಿ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಪರಿಸ್ಥಿತಿ ಹೇಗಿದೆ ಎಂದು ವಿವರಿಸುವ 59 ಸೆಕಂಡ್‌ನ ವಿಡಂಬನಾತ್ಮಕ ವಿಡಿಯೋವನ್ನು ಇನ್ಸ್‌ಟಾಗ್ರಾಮ್ ಹಾಗೂ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಹಿಂದಿ ಭಾಷಿಕರೇ ತುಂಬಿಕೊಂಡಿದ್ದಾರೆ. ಹೀಗಿರುವ ಹೊತ್ತಲ್ಲಿ ಬ್ಯಾಂಕುಗಳಿಗೆ ಉದ್ಯೋಗಿಗಳನ್ನು ಹೇಗೆ ನೇಮಕ ಮಾಡಿಕೊಳ್ಳುತ್ತಾರೆ ಅನ್ನೋದನ್ನ ತಮಾಷೆಯಾಗಿ ಮಾಡಿರುವ ವಿಡಿಯೋ ಇದಾಗಿದೆ.
ಬ್ಯಾಂಕ್ ಉದ್ಯೋಗಿಗಳನ್ನು ಹೇಗೆ ನೇಮಿಸಿಕೊಳ್ಳಲಾಗುತ್ತದೆ ಎನ್ನುವ ಟೈಟಲ್‌ನಲ್ಲಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ನಂದಿನಿಯ ರೆಸ್ಯುಮ್‌ಅನ್ನು ನೋಡಿ, 'ನಿಮ್ಮ ರೆಸ್ಯುಮ್‌ಅನ್ನು ಚೆಕ್ ಮಾಡಿದ್ದೇನೆ ನಂದಿನಿ ಅವರೇ, ಐ ಆಮ್ ಸಾರಿ ಟು ಸೇ ದಿಸ್. ನೀವು ಈ ಬ್ಯಾಂಕ್ ಜಾಬ್‌ಗೆ ಸೂಟ್ ಆಗೋದಿಲ್ಲ. ಸೋ ಯು ಕ್ಯಾನ್ ಲೀವ್' ಎಂದು ಹೇಳುತ್ತಾರೆ.
ಇದರ ಬೆನ್ನಲ್ಲಿಯೇ ಸಿಟ್ಟಿನಲ್ಲಿ ಮಾತನಾಡುವ ನಂದಿನಿ, 'ಕೌಂಟರ್ ನಂಬರ್ ದೋ ಪೇ ಜಾಹೋ, ಕೌಂಟರ್ ನಂಬರ್ 3 ಪೇ ಜಾಹೋ, ಪೆನ್ ನಹೀ ಲೇಕೇ ಆನಾ, ಕ್ಯಾ ಲೇಕೇ ಆನಾ, ಅಬ್ ಲಂಚ್ ಟೈಮ್ ತುಮ್ ಆಮೇಲೇ ಆನಾ, ಕ್ಯಾ ಕನ್ನಡ್ ನಹೀ ಆನಾ, ಮುಜೇ, ಕ್ಯಾ ತುಮ್, ಹಿಂದಿ ರಾಷ್ಟ್ರಭಾಷಾ, ನ್ಯಾಷನಲ್ ಲ್ಯಾಂಗ್ವೇಜ್, ತುಮ್ ನಹೀ, ಜಾಹೋ' ಎಂದು ಒಂದೇ ಸಮನೆ ಹಿಂದಿ ಮಿಶ್ರಿತ ಹಾಗೂ ಅಲ್ಪ ಕನ್ನಡದ ಫಿಲ್ಮಿ ಡೈಲಾಗ್ ಹೊಡೆಯುತ್ತಾಳೆ. ಇದರ ಬೆನ್ನಲ್ಲಿಯೇ ರೆಸ್ಯುಮ್ ನೋಡಿದ ವ್ಯಕ್ತಿ, 'ನಂದಿನಿ, ಕಿತ್ನಾ ಲಕ್ಷಾ ಪ್ಯಾಕೇಜ್ ಸ್ಯಾಲರಿ ತುಮ್ ಬೋಲೋ, ಕಿತ್ನಾ ಪೈಸಾ ಬೋಲೋ, ಬ್ಯಾಂಕ್ ಮ್ಯಾನೇಜರ್, ಸಿಇಒ ಜಾಬ್ ತುಮ್ 100 ಪರ್ಸೆಂಟ್' ಎಂದು ಹೇಳುತ್ತಾನೆ.
ಇದರೊಂದಿಗೆ ಮತ್ತೊಂದು ಸಾಲನ್ನು ಶೇರ್ ಮಾಡಿಕೊಳ್ಳುವ ವೇಳೆ ಬರೆದುಕೊಂಡಿರುವ ಅವರು, ಯಾರಿಗಾದರೂ ಕಂಟೆಂಟ್ ಅರ್ಥವಾಗದೇ ಇದ್ದಲ್ಲಿ, ನಿಮ್ಮ ಹತ್ತಿರ ಬ್ಯಾಂಕ್ ಬ್ರ್ಯಾಂಚ್‌ಗೆ ಹೋಗಿ ಎಂದು ತಿಳಿಸಿದ್ದಾರೆ.
72 ಲಕ್ಷ ವೋಟ್ ಪಡೆದ ಬಿಗ್ ಬಾಸ್ ಸ್ಪರ್ಧಿ, ಕಿಚ್ಚ ರಿವಿಲ್ ಮಾಡಿದ್ರು ಅಚ್ಚರಿಯ ನಂಬರ್!
ವಿಕಿಪೆಡಿಯಾ ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಯಾವ ಬ್ಯಾಂಕ್ ಎಂದು ಹೇಳೋದನ್ನೇ ಮರೆತಿದ್ದೀರಿ ಎಂದಿದ್ದಾರೆ. ನೋಡಿ ನೋಡಿ, ನಂದಿನಿ, ಅಮೂಲ್ ಆಗಿ ಬದಲಾಗ್ತಾ ಇರೋದನ್ನ ನೋಡಿ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.ಈ ರೀಲ್‌ಅನ್ನು ನೋಡಿದ ಬಳಿಕ ಹಿಂದಿ ವಾಲಾ ಬ್ಯಾಂಕ್ ಎಂಪ್ಲಾಯ್ ಸೂಸೈಡ್ ಮಾಡಿಕೊಳ್ಳುವುದು ಖಂಡಿತ, ನೂರಕ್ಕೆ ನೂರು ಇದೇ ಪರಿಸ್ಥಿತಿ ಇದೆ. 'ಏಕ್ ಗಾವ್ ಮೇ ಕಿಸಾನ್ ರಘುತಾ, ಏಕ್ ಕಿಸಾನ್ ಗಾವ್ ಮೇ ರಘುತಾತ. ಮುಜೆ ಹಿಂದಿ ತೊಡ ತೊಡ ಆತ' ಎಂದು ಕಾಮೆಂಟ್ ಮಾಡಿದ್ದಾರೆ.
ನಾನು ನಂದಿನಿ ಬೆಂಗ್ಳೂರು ಬಂದೀನಿ... ವಿಕಿಪೀಡಿಯಾ ಖ್ಯಾತಿಯ ವಿಕ್ಕಿ ಈ ಹಾಡು ಫುಲ್ ವೈರಲ್