ಒಂದು ಕಡೆ ಮೀ ಟೂ ಎನ್ನುವುದು ಬಾಲಿವುಡ್ ನಲ್ಲಿ ಸದ್ದು ಮಾಡುತ್ತ ಆರೋಪ-ಪ್ರತ್ಯಾರೋಪಗಳಲ್ಲೇ ಮುಳುಗಿದ್ದರೆ ಈಗ ಪುರುಷರಿಂದಲೇ ಪುರುಷರ ಮೇಲೆಯೇ ಲೈಂಗಿಕ ಕಿರುಕುಳುದ ಆರೋಪ ಕೇಳಿ ಬಂದಿದೆ.

ಮುಂಬೈ(ಅ.31) ಟಿವಿ ಮಾಧ್ಯಮವೊಂಕ್ಕೆ ನೀಡಿರುವ ಸಂದರ್ಶನದಲ್ಲಿ ಮಾಡೆಲ್ ಮತ್ತು ಯು ಟ್ಯೂಬ್ ಸ್ಟಾರ್ ಸಾಹಿಲ್ ಚೌಧರಿ ತಮಗಾದ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಒಂದು ಸಂದರ್ಭದಲ್ಲಿ ಬಾಲಿವುಡ್ ನ ಪ್ರಖ್ಯಾತ ಡಿಸೈನರ್ ರೋಹಿತ್ ವರ್ಮಾ ನನಗೆ ಕಿಸ್ ಮಾಡಲು ಬಂದಿದ್ದರು ಎಂದು ಆರೋಪಿಸಿದ್ದಾರೆ. ರೋಹಿತ್ ವರ್ಮಾ ಅಂದು ನಡೆದುಕೊಂಡಿದ್ದ ರೀತಿ ನಿಜಕ್ಕೂ ಅಸಹ್ಯ ಹುಟ್ಟಿಸುವಂತೆ ಇತ್ತು. ಕೆಲಸದ ನಿಮಿತ್ತ ನಾನು ಅವರ ಜಾಗಕ್ಕೆ ಒಂದೆರಡು ಸಾರಿ ತೆರಳುವ ಸಂದರ್ಭ ಎದುರಾಗಿತ್ತು. ಆ ವೇಳೆ ಅವರು ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.

ಇಷ್ಟು ದಿನ ಮಹಿಳೆಯರು ಮೀ ಟೂ ಆರೋಪ ಮಾಡುತ್ತಿದ್ದು ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ನಡುವೆ ಇದ್ದ ಆರೋಪಳು ಈಗ ಪುರುಷ-ಪುರುಷ ನಡುವೆಯೂ ಉಂಟಾಗಿದ್ದು ಬಿ ಟೌನ್ ನಲ್ಲಿ ಸದ್ಯ ದೊಡ್ಡ ಮಟ್ಟದ ಸುದ್ದಿಯಾಗಿದೆ.