ಬೆಂಗಳೂರು(ಅ.5): ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅಭಿನಯದ ಚೊಚ್ಚಲ ಸಿನಿಮಾ ಜಾಗ್ವಾರ್​ ನಾಳೆ ತೆರೆ ಕಾಣಲು ಸಿದ್ಧವಾಗಿದೆ. ಮೊಮ್ಮಗ ಅಭಿನಯಿಸಿದ ಜಾಗ್ವಾರ್​ ಸಿನಿಮಾದ ಮೊದಲ ಶೋ ನೋಡಲು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ನಗರದ ಸಂತೋಷ ಚಿತ್ರಮಂದಿರಕ್ಕೆ ತೆರಳಲಿದ್ದಾರೆ.ಜೊತೆಗೆ ಮಾಜಿ ಸಿಎಂ ಕುಮಾರ ಸ್ವಾಮಿ ದಂಪತಿ ಹಾಜರಾಗಲಿದ್ದಾರೆ. ಮತ್ತೊಂದು ಕಡೆ ಸಿನಿಮಾ ರಂಗದಿಂದ ದೂರನೇ ಉಳಿದಿರುವ ಪ್ರಜ್ವಲ್ ರೇವಣ್ಣ ನಗರದ ಮೀನಾಕ್ಷಿ ಮಾಲ್​ನಲ್ಲಿ ನಡೆಯುವ ಜಾಗ್ವಾರ್ ಸಿನಿಮಾದ ಇಡೀ ಚಿತ್ರಮಂದಿರವೇ ಬುಕ್​ ಮಾಡಿದ್ದಾರೆ. ಇನ್ನು ಹೊಸ ಹೀರೊ ಪ್ರವೇಶಕ್ಕೆ ಎಲ್ಲರ ಕಣ್ಣುಗಳು 'ಜಾಗ್ವಾರ್'ನತ್ತ ನೆಟ್ಟಿವೆ. ಈ ಚಿತ್ರಕ್ಕೆ ತೆಲುಗಿನ ಮಹದೇವ್ ನಿರ್ದೇಶನ ಮಾಡಿದ್ದರೆ, ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ.