ಉಪೇಂದ್ರ ಹೊಸ ಪಕ್ಷ ಕಟ್ಟುವ ಬಗ್ಗೆ ದೇವೇಗೌಡರ ಪ್ರತಿಕ್ರಿಯೆ

ಕಡೂರು(ಆ.12): ನಟ ಉಪೇಂದ್ರ ರಾಜಕೀಯ ಸೇರ್ಪಡೆ ಈಗ ಎಲ್ಲಡೆ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ.ಈ ಬಗ್ಗೆ ವಿವಿಧ ಕ್ಷೇತ್ರದ ಗಣ್ಯರು ತಮ್ಮದೆ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ ಪಕ್ಷಕ್ಕೆ ಆಹ್ವಾನಿಸಿದ್ದು ಆಯಿತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅವರ ಬಳಿ ಮಾತನಾಡಿಲ್ಲ ಮಾಧ್ಯಮದಲ್ಲಿ ಪ್ರಸಾರವಾಗಿರುವುದನ್ನು ಮಾತ್ರ ನೋಡಿದ್ದೇನೆ. ಪತ್ಯೇಕ ಪಕ್ಷ ಕಟ್ಟುವ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ ಹಾಸನಕ್ಕೆ ಆಗಮಿಸಿದ್ದ ವೇಳೆ ಅಮಿತ್ ಷಾ ಹಾಗೂ ರಾಹುಲ್ ಗಾಂಧಿ ಬೆಂಗಳೂರು ಭೇಟಿಯ ಬಗ್ಗೆ ಮಾತನಾಡಿ. ಅವರು ಬಂದು ಏನು ಬೇಕಾದರೂ ಮಾಡಲಿ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಎದುರಿಸುವ ಶಕ್ತಿ ನನಗಿದೆ. ದೇವರು ಆ ಶಕ್ತಿ ಕೊಟ್ಟಿದ್ದಾನೆ. ನನಗೆ ನನ್ನ ಜನರ ಮೇಲೆ ವಿಶ್ವಾಸವಿದೆ' ಎಂದು ಹೇಳಿದರು.

ಸಿಎಂ'ಗೆ ಶುಭಾಶಯ

69 ನೇ ಹುಟ್ಟುಹಬ್ಬಕ್ಕೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ದೂರವಾಣಿ ಕರೆ ಮಾಡಿ ಶುಭ ಕೋರಿದರು. ನಾನು ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿದ್ದೇನೆ, ಶ್ರಾವಣ ಶನಿವಾರದ ಪೂಜೆಗೆ ಬಂದಿದ್ದೇನೆ, ಇಂದು ಒಳ್ಳೇ ದಿನ, ನಿನಗೂ ಒಳ್ಳೆಯದಾಗಲಪ್ಪ ಎಂದು ಹರಸಿದರು.

(ಸಾಂದರ್ಭಿಕ ಚಿತ್ರ)