ಹ್ಯಾಟ್ರಿಕ್ ಹೀರೋ ಅಭಿನಯದ ಮಫ್ತಿಗೆ ಜನರ ರೆಸ್ಪಾನ್ಸ್ ಸಕತ್ತಾಗಿದೆ. ಇಂದು  ಸ್ವತ: ಶಿವರಾಜ್ ಕುಮಾರ್ ಬೆಂಗಳೂರಿನ ಸಂತೋಷ್ ಥಿಯೇಟ್'ಗೆ ಬಂದು ಫ್ಯಾಮಿಲಿ ಜೊತೆಗೆ ಸಿನಿಮಾ ವೀಕ್ಷಿಸಿದರು.

ಬೆಂಗಳೂರು (ಡಿ.03): ಹ್ಯಾಟ್ರಿಕ್ ಹೀರೋ ಅಭಿನಯದ ಮಫ್ತಿಗೆ ಜನರ ರೆಸ್ಪಾನ್ಸ್ ಸಕತ್ತಾಗಿದೆ. ಇಂದು  ಸ್ವತ: ಶಿವರಾಜ್ ಕುಮಾರ್ ಬೆಂಗಳೂರಿನ ಸಂತೋಷ್ ಥಿಯೇಟ್'ಗೆ ಬಂದು ಫ್ಯಾಮಿಲಿ ಜೊತೆಗೆ ಸಿನಿಮಾ ವೀಕ್ಷಿಸಿದರು.

ಆಗ ನಾಯಕನ ಜೊತೆಗೆ ಮತ್ತೊಬ್ಬ ಸ್ಟಾರ್ ಕೂಡ ಇದ್ದರು. ಬಹದ್ದೂರು ಹುಡುಗ ಧೃವ ಶಿವಣ್ಣ ಜೊತೆಗೆ ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು. ಧೃವ ಚಿತ್ರ ವೀಕ್ಷಣೆಗೆ ಬಂದಿದ್ದಕ್ಕೆ ಒಂದು ವಿಶೇಷ ಇದೆ. ಧೃವ ಅಭಿನಯದ ಭರ್ಜರಿ ಚಿತ್ರ ಈಗ 75 ದಿನ ಪೂರೈಸಿದೆ. ಸಡಗರದಲ್ಲಿ  ಧೃವ ಸರ್ಜಾ ಜೊತೆಗೆ ಶಿವಣ್ಣ ಭಾಗಿ ಕೇಕ್ ಕಟ್ ಮಾಡಿ ಸಂಭ್ರಮಪಟ್ಟರು. ಇದೇ ವೇಳೆ ನಟ ಧೃವ ಸರ್ಜಾ ಮಾತನಾಡಿ,  ಕನ್ನಡಕ್ಕೆ ಒಬ್ಬರೇ ಹ್ಯಾಟ್ರಿಕ್ ಹೀರೋ ಎಂದರು.
ಒಟ್ಟಿನಲ್ಲಿ ಭರ್ಜರಿ ಸಿನಿಮಾದ ಸೆಲೆಬ್ರೇಶನ್ ಮಾಡಿ ಮಫ್ತಿ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.