ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ತೆಲುಗು, ತಮಿಳು ಚಿತ್ರರಂಗಕ್ಕೆ ಹೋಗಿ ತಮ್ಮ ಛಾಪು ಮಾಡಿಸಿದಾಕೆ ಹರ್ಷಿಕಾ ಪೂಣಚ್ಚ. ಈಗ ಅವರ ಮೇಲೆ ಮಲಯಾಳಂ ಚಿತ್ರರಂಗಕ್ಕೂ ಲವ್ವಾಗಿದೆ. ಅಜಿತ್ ಸಿ ಲೋಕೇಶ್ ನಿರ್ದೇಶನದ ಮಲಯಾಳಂನ ‘ಚಾರ್‌ಮಿನಾರ್’ ಚಿತ್ರಕ್ಕೆ ಕನ್ನಡದ ಹುಡುಗಿ ಹರ್ಷಿಕಾ ಆಯ್ಕೆಯಾಗಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ತೆಲುಗು, ತಮಿಳು ಚಿತ್ರರಂಗಕ್ಕೆ ಹೋಗಿ ತಮ್ಮ ಛಾಪು ಮಾಡಿಸಿದಾಕೆ ಹರ್ಷಿಕಾ ಪೂಣಚ್ಚ. ಈಗ ಅವರ ಮೇಲೆ ಮಲಯಾಳಂ ಚಿತ್ರರಂಗಕ್ಕೂ ಲವ್ವಾಗಿದೆ. ಅಜಿತ್ ಸಿ ಲೋಕೇಶ್ ನಿರ್ದೇಶನದ ಮಲಯಾಳಂನ ‘ಚಾರ್ಮಿನಾರ್’ ಚಿತ್ರಕ್ಕೆ ಕನ್ನಡದ ಹುಡುಗಿ ಹರ್ಷಿಕಾ ಆಯ್ಕೆಯಾಗಿದ್ದಾರೆ.
ಇದೊಂದು ಟ್ರಯಾಂಗಲ್ ಲವ್ಸ್ಟೋರಿ. ಚಿತ್ರಕ್ಕೆ ಇಬ್ಬರು ಹೀರೋಗಳು. ಕೃಷ್ಣ ಮೆನನ್ ಮತ್ತು ಅಶ್ವಿನ್ ಕುಮಾರ್. ಇಬ್ಬರು ಹೀರೋಗಳ ಮುದ್ದಿನ ನಾಯಕಿ ಹರ್ಷಿಕಾ ಪೂಣಚ್ಚ. ಈ ಚಿತ್ರದಲ್ಲಿ ಹರ್ಷಿಕಾ ಅವರಿಗೆ ಎರಡು ಶೇಡ್ ಇರುವ ಪಾತ್ರ. ಆರಂಭದಲ್ಲಿ ಕನ್ನಡಕ ಹಾಕಿಕೊಂಡು ಪಕ್ಕದ ಮನೆ ಹುಡುಗಿಯಂತಿದ್ದರೆ ನಂತರ ಸೂಪರ್ ಮಾಡೆಲ್ ಆಗಿ ಹಾಟ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಒಂದು ಚಿತ್ರದಲ್ಲಿ ಎರಡು ಥರ ಕಾಣಿಸಿಕೊಳ್ಳಬೇಕು, ಬೇರೆ ಬೇರೆ ಥರದ ಆ್ಯಟಿಟ್ಯೂಡ್ ರೂಢಿಸಿಕೊಳ್ಳಬೇಕು ಅನ್ನು ವುದು ಹರ್ಷಿಕಾ ಅವರಿಗೆ ಈ ಚಿತ್ರದಲ್ಲಿರುವ ಸವಾಲು. ಅಂದಹಾಗೆ ಹರ್ಷಿಕಾ ಮಲಯಾಳಂ ಚಿತ್ರದಲ್ಲಿ ಕನ್ನಡದ ಹುಡುಗಿಯ ಅದರಲ್ಲೂ ಬೆಂಗಳೂರು ಹುಡುಗಿಯ ಪಾತ್ರದಲ್ಲೇ ಕಾಣಿಸಿಕೊಂಡಿರುವುದು ವಿಶೇಷ.
ಅಲ್ಲದೇ ಮಲಯಾಳಂ ಚಿತ್ರದಲ್ಲಿ ಕನ್ನಡದಲ್ಲೇ ಮಾತನಾಡುವ ದೃಶ್ಯಗಳಿವೆಯಂತೆ. ‘ನಾನು ಈ ಚಿತ್ರದಲ್ಲಿ ಕನ್ನಡದಲ್ಲಿ ಮಾತನಾಡುತ್ತೇನೆ. ಆರಂಭದ ದೃಶ್ಯದಲ್ಲೇ ಕನ್ನಡ ಬರುತ್ತದೆ. ನಿರ್ದೇಶಕ ಅಜಿತ್ ಲೋಕೇಶ್ ಸುಮಾರು 1500 ಹುಡುಗಿಯರನ್ನು ಆಡಿಷನ್ ಮಾಡಿದ್ದರು. ಅವರಿಗೆ ಕನ್ನಡದ ಹುಡುಗಿಯೊಬ್ಬಳು ಬೇಕಾಗಿತ್ತು. ಕಡೆಗೆ ನನ್ನ ಫೋಟೋ ನೋಡಿ ಆಯ್ಕೆ ಮಾಡಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿದೆ.
ಮುಂದಿನ ತಿಂಗಳು ಚಿತ್ರೀಕರಣ ಪೂರ್ತಿಯಾಗಲಿದೆ. ನನ್ನ ತಮಿಳು ಚಿತ್ರ ‘ಉನ್ ಕಾದಲ್ ಎರಿಂದಾಲ್’ ಬಿಡುಗಡೆಗೆ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಮಲಯಾಳಂ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ. ನಾನಾಗಿ ಯಾವುದನ್ನೂ ಹುಡುಕಿಕೊಂಡು ಹೋಗಿಲ್ಲ. ಅವಕಾಶಗಳು ನನ್ನ ಹುಡುಕಿಕೊಂಡು ಬಂದಿದ್ದು ನನಗೆ ಬಹಳ ಸಂತೋಷ ಕೊಟ್ಟಿದೆ’ ಎನ್ನುತ್ತಾರೆ ಹರ್ಷಿಕಾ.
ಅನಿವಾಸಿ ಭಾರತೀಯ ಸಿರಾಜುದ್ದೀನ್ ನಿರ್ಮಾಣದ ಚಿತ್ರವಿದು. ಕೊಚ್ಚಿನ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿನ ಚಿತ್ರೀಕರಣ ನಡೆದ ಮೇಲೆ ಬೆಂಗಳೂರಲ್ಲಿ ಚಿತ್ರೀಕರಿಸುವ ಉದ್ದೇಶ ಚಿತ್ರತಂಡಕ್ಕಿದೆ. ಚಿತ್ರದ ನಿರ್ದೇಶಕ ಅಜಿತ್ ಈ ಹಿಂದೆ ಮಲಯಾಳಂ ಸೂಪರ್ ಸ್ಟಾರ್ ಫಹಾದ್ ಫಸಿಲ್ ನಟನೆಯ ಚಿತ್ರಕ್ಕೆ ಚಿತ್ರಕತೆ ಬರೆದಿದ್ದರು.
(ಕನ್ನಡಪ್ರಭ ಸಿನಿವಾರ್ತೆ)
