ಖಾಕಿ ಖದರ್‌ನಲ್ಲಿ ಹರಿಪ್ರಿಯಾ

HariPrriya  Police Role In D/o Parvatamma
Highlights

ಪೊಲೀಸ್ ಜೀಪ್ ಮೇಲೆ ಕೂತಿರುವ ಹರಿಪ್ರಿಯಾ ಅವರನ್ನು ನೋಡಿದಾಗ ಪಾರ್ವತಮ್ಮನ ಮಗಳು ಖಾಕಿ ಖದರಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಅವರು ಪೊಲೀಸ್ ಡ್ರೆಸ್ ತೊಡಲ್ಲ. ಇಲ್ಲಿ ಅವರದ್ದು ತನಿಖಾಧಿಕಾರಿ ಕೆಲಸ. ಒಂದು ಕೊಲೆಯ ರಹಸ್ಯವನ್ನು ಬೇಧಿಸುವ ಅಧಿಕಾರಿಯ ಪಾತ್ರಕ್ಕೆ ವಿಶೇಷವಾದ ಉಡುಗೆಗಳನ್ನು ಬಳಸಲಾಗಿದೆ.

ಬೆಂಗಳೂರು[ಮೇ.29]: ನೀರ್‌ದೋಸೆಯಲ್ಲಿ ಪಾರ ದರ್ಶಿನಿ, ಬೆಲ್‌ಬಾಟಮ್ ನಲ್ಲಿ ಪೂರ್ವಕಾಲಿನಿ, ರಿಕ್ಕಿಯಲ್ಲಿ ಗ್ರಾಮೀಣ ಕಮಲಿನಿ- ಹೀಗೆ ಹರಿಪ್ರಿಯಾ ತಾನು ಎಲ್ಲದಕ್ಕೂ ಸೈ, ಯಾವುದಕ್ಕೂ ಜೈ ಅಂತ ನಿರೂಪಿಸಿದವರು. ಇದೀಗ ಅವರು ಮತ್ತೊಂದು ಗೆಟಪ್ಪಿನಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಯೆಸ್, ಹರಿಪ್ರಿಯಾ ಅಭಿನಯಿಸುತ್ತಿರುವ 'D/O ಪಾರ್ವತಮ್ಮ' ಚಿತ್ರದ ಫಸ್ಟ್ ಲುಕ್ ಹೊರಗೆ ಬಂದಿದೆ. 

ಪೊಲೀಸ್ ಜೀಪ್ ಮೇಲೆ ಕೂತಿರುವ ಹರಿಪ್ರಿಯಾ ಅವರನ್ನು ನೋಡಿದಾಗ ಪಾರ್ವತಮ್ಮನ ಮಗಳು ಖಾಕಿ ಖದರಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಅವರು ಪೊಲೀಸ್ ಡ್ರೆಸ್ ತೊಡಲ್ಲ. ಇಲ್ಲಿ ಅವರದ್ದು ತನಿಖಾಧಿಕಾರಿ ಕೆಲಸ. ಒಂದು ಕೊಲೆಯ ರಹಸ್ಯವನ್ನು ಬೇಧಿಸುವ ಅಧಿಕಾರಿಯ ಪಾತ್ರಕ್ಕೆ ವಿಶೇಷವಾದ ಉಡುಗೆಗಳನ್ನು ಬಳಸಲಾಗಿದೆ.

ಹರಿಪ್ರಿಯಾ ಅವರ ಕಾಸ್ಟ್ಯೂಮ್ ಡಿಸೈನ್ ಮಾಡಿರುವುದು ಪ್ರಗತಿ ಶೆಟ್ಟಿ. ಈ ಹಿಂದೆ 'ಬೆಲ್‌ಬಾಟಮ್' ಚಿತ್ರದ ಕಾಸ್ಟ್ಯೂಮ್ ಇಷ್ಟವಾದ್ದರಿಂದ ಈ ಚಿತ್ರದಲ್ಲೂ ಅವರದೇ ಉಡುಗೆ ತೊಡುಗೆ ಇದೆ. ಶಂಕರ್ ಎಂಬುವವರು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಈಗಾಗಲೇ 15 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. 'ನನ್ನದು ಚಿತ್ರದಲ್ಲಿ ತನಿಖಾ ಅಧಿಕಾರಿ ಪಾತ್ರ. ಅಧಿಕಾರಿಯಾಗಿ ಕಾಣಿಸಿ ಕೊಳ್ಳುತ್ತಿರುವುದರಿಂದ ತುಂಬಾ ಮೇಕಪ್ ಇರಬಾರದು. ಆದಷ್ಟು ನ್ಯಾಚುರಲ್ಲಾಗಿ ಕಾಣಿಸಿಕೊಳ್ಳಬೇಕು. ಅದಕ್ಕೆ ತಕ್ಕಂತಹ ಕಾಸ್ಟ್ಯೂಮ್‌ಗಳನ್ನು ಡಿಸೈನ್ ಮಾಡಿದ್ದೇವೆ. ಚಿತ್ರದ ಹೆಸರೇ ಹೇಳುವಂತೆ ಅಮ್ಮ ಮತ್ತು ಮಗಳ ನಡುವಿನ ಈ ಕತೆಯಲ್ಲಿ ನನ್ನದು ಎರಡು ಪಾತ್ರ. ಈಗ ಪೊಲೀಸ್ ಅಧಿಕಾರಿ ಪಾತ್ರದ ಚಿತ್ರೀಕರಣ ನಡೆಯುತ್ತಿದೆ. ಮುಂದೆ ಕಾಲೇಜ್ ಹುಡುಗಿ ಪಾತ್ರದ ಚಿತ್ರೀಕರಣ ನಡೆಯಲಿದೆ. 

ಇನ್ವೆಸ್ಟಿಗೇಷನ್ ಅಫೀಸರ್ ವೈದೇಹಿ ಎನ್ನುವುದು ಚಿತ್ರದಲ್ಲಿ ನನ್ನ ಪಾತ್ರದ ಹೆಸರು' ಎನ್ನುತ್ತಾರೆ ನಟಿ ಹರಿಪ್ರಿಯಾ. ಇನ್ನೂ ಪಾರ್ವತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸುಮಲತಾ ಅವರು. ?

ಆರು ಸಿನಿಮಾ ಹರಿಪ್ರಿಯಾ ಕೈಯಲ್ಲಿ!
ಒಟ್ಟು ಆರು ಚಿತ್ರಗಳು ಹರಿಪ್ರಿಯಾ ಅವರ ಮುಂದಿವೆ. ಈ ಪೈಕಿ 'D/O ಪಾರ್ವತಮ್ಮ' ಹಾಗೂ 'ಬೆಲ್‌ಬಾಟಮ್' ಚಿತ್ರಗಳು ಶೂಟಿಂಗ್ ಮೈದಾನದಲ್ಲಿವೆ. ಉಳಿದಂತೆ 'ಕುರುಕ್ಷೇತ್ರ', 'ಕಥಾಸಂಗಮ', 'ಲೈಫ್ ಜತೆ ಒಂದ್ ಸೆಲ್ಫಿ' ಹಾಗೂ 'ಸೂಜಿದಾರ' ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ. ಬಿಡುಗಡೆಯ ಸಾಲಿನಲ್ಲಿರುವ ಚಿತ್ರಗಳ ಪೈಕಿ 'ಕುರುಕ್ಷೇತ್ರ' ಮೊದಲು ತೆರೆ ಕಾಣಲಿದೆ. ನಂತರ 'ಸೂಜಿದಾರ' ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ. 'ರು ಚಿತ್ರಗಳಲ್ಲೂ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಚುನಾವಣೆ, ಐಪಿಎಲ್ ಕಾರಣಕ್ಕೆ ಚಿತ್ರಗಳು ಬಿಡುಗಡೆಗೆ ತಡವಾಗಿದೆ. ಈಗ ಒಂದರ ನಂತರ ಒಂದು ಸಿನಿಮಾ ತೆರೆಗೆ ಬರಲಿವೆ' ಎಂಬುದು ಹರಿಪ್ರಿಯಾ ಮಾತು. 

loader