ವರನಟ ಡಾ| ರಾಜಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರ ಗುರು ರಾಜಕುಮಾರ್ (ಯುವ) ನಿಶ್ಚಿತಾರ್ಥ  ಜು.5ರಂದು ಮೈಸೂರಿನಲ್ಲಿ ನಡೆಯಲಿದೆ.  

ಬೆಂಗಳೂರು : ವರನಟ ಡಾ| ರಾಜಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರ ಗುರು ರಾಜಕುಮಾರ್ (ಯುವ) ನಿಶ್ಚಿತಾರ್ಥ ಜು.5ರಂದು ಮೈಸೂರಿನಲ್ಲಿ ನಡೆಯಲಿದೆ. 

ಶ್ರೀದೇವಿ ಜೊತೆ ನಿಶ್ಚಿತಾರ್ಥ ನಡೆಯಲಿದ್ದು, ಇದೊಂದು ಖಾಸಗಿ ಸಮಾರಂಭವಾಗಿದೆ ಎಂದು ಕುಟುಂಬದ ಮೂಲಗಳು ಹೇಳಿವೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಶ್ರೀದೇವಿ ಮೈಸೂರಿನ ಮಧ್ಯಮವರ್ಗದ ಕುಟುಂಬದಿಂದ ಬಂದವರು. 

ಈ ಹಿಂದೆ ಗುರು ಅವರ ಅಣ್ಣ ವಿನಯ್ ರಾಜಕುಮಾರ್ ಅವರ ರನ್ ಆ್ಯಂಟನಿ ಸಿನಿಮಾದ ಪ್ರಚಾರ ಸಂಬಂಧಿ ಜವಾಬ್ದಾರಿಯನ್ನು ನೋಡಿಕೊಂಡಿದ್ದರು. ವಜ್ರೇಶ್ವರಿ ಕಂಬೈನ್ಸ್ ನಲ್ಲೂ ಕಾರ್ಯ ನಿರ್ವಹಿಸಿದ್ದರು ಎಂದು ತಿಳಿದುಬಂದಿದೆ. ನಿಶ್ಚಿತಾರ್ಥ ಬಳಿಕ ಗುರು ಅವರು ಚಿತ್ರ ತರಬೇತಿಗಾಗಿ ಮುಂಬೈಗೆ ತೆರಳಲಿದ್ದಾರೆ.