#JusticeforVidvat ಸಹಪಾಠಿಗಳಿಂದ ಸ್ನೇಹಿತರು: ನಿನ್ನ ನೋವು ನನ್ನ ನೋವು ಬೇಗ ಗುಣವಾಗಿ ಬಾ ಸೋದರ

First Published 20, Feb 2018, 5:51 PM IST
Guru Rajkumar FB Post For Vidvat
Highlights

ಬೇಗ ಗುಣಮುಖವಾಗಿ ಬಾ. ಸದಾ ನಿನಗಾಗಿ ಕಾಯುತ್ತಿರುವೆ ಎಂದು ಸ್ಟೇಟಸ್ ಹಾಕಿಕೊಂಡು #JusticeforVidvat ಹ್ಯಾಶ್'ಟ್ಯಾಗ್ ಕೂಡ ಕೊಟ್ಟಿದ್ದಾರೆ.

ಬೆಂಗಳೂರು(ಫೆ.20): ಡಾ.ರಾಜ್ ಅವರ ಮೊಮ್ಮಗ ಗುರು ರಾಜ್'ಕುಮಾರ್ ಹಾಗೂ ಶಾಸಕರ ಪುತ್ರ ನಲಪಾಡ್'ನಿಂದ ಹಲ್ಲೆಗೊಳಗಾದ ವಿದ್ವತ್ ಚಿಕ್ಕಂದಿನಿಂದಲೂ ಸಹಪಾಠಿಗಳು ಜೊತೆಗೆ ಖಾಸ ಗೆಳೆಯರು.

ಈಗ ಸ್ವತಃ ತಮ್ಮ ಮುಂದೆಯೇ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಗೆಳೆಯ ವಿದ್ವತ್ ಬಗ್ಗೆ ಗುರು ರಾಜ್ ಕುಮಾರ್ ಅವರು ತಮ್ಮ ಫೇಸ್'ಬುಕ್ ಖಾತೆಯಲ್ಲಿ ಚಿಕ್ಕಂದಿನ ಹಾಗೂ ಇತ್ತೀಚಿನ ಫೋಟೊವನ್ನು ಪಬ್ಲಿಶ್ ಮಾಡಿ ನಿನಗೆ ನೋವಾದರೆ ನನಗೆ ನೋವಾಗುತ್ತದೆ. ಬೇಗ ಗುಣಮುಖವಾಗಿ ಬಾ. ಸದಾ ನಿನಗಾಗಿ ಕಾಯುತ್ತಿರುವೆ ಎಂದು ಸ್ಟೇಟಸ್ ಹಾಕಿಕೊಂಡು #JusticeforVidvat ಹ್ಯಾಶ್'ಟ್ಯಾಗ್ ಕೂಡ ಕೊಟ್ಟಿದ್ದಾರೆ.

ಈ ಸ್ಟೇಟಸ್'ಗೆ 1.9 ಸಾವಿರ ಮಂದಿ ಲೈಕ್ ಮಾಡಿದ್ದು, 350 ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ನೂರಾರು ಮಂದಿ ಕಮೆಂಟ್ ಮಾಡಿ ಬೇಗ ಗುಣವಾಗು ಎಂದು ಹಾರೈಸಿದ್ದಾರೆ.

 

loader