'ಒಂದೇ ಬಳ್ಳಿಯ ಹೂಗಳು' ಚಿತ್ರದ 'ನೀನೆಲ್ಲಿ ನಡೆವೆ ದೂರ' ಸೇರಿ ಬಹು ಭಾಷೆಗಳಲ್ಲಿ ಪ್ರಖ್ಯಾತ ಹಾಡುಗಳನ್ನು ಹಾಡಿರುವ ಬಾಲಿವುಡ್ ಗಾಯಕ ಮೊಹ್ಮದ್ ರಫಿ ಅವರ 93ನೇ ಹುಟ್ಟುಹಬ್ಬವನ್ನು ಗೂಗಲ್ ಡೂಡಲ್ ಸ್ಮರಿಸಿಕೊಂಡಿದೆ.
ಬೆಂಗಳೂರು: 'ಒಂದೇ ಬಳ್ಳಿಯ ಹೂಗಳು' ಚಿತ್ರದ 'ನೀನೆಲ್ಲಿ ನಡೆವೆ ದೂರ' ಸೇರಿ ಬಹು ಭಾಷೆಗಳಲ್ಲಿ ಪ್ರಖ್ಯಾತ ಹಾಡುಗಳನ್ನು ಹಾಡಿರುವ ಬಾಲಿವುಡ್ ಗಾಯಕ ಮೊಹ್ಮದ್ ರಫಿ ಅವರ 93ನೇ ಹುಟ್ಟುಹಬ್ಬವನ್ನು ಗೂಗಲ್ ಡೂಡಲ್ ಸ್ಮರಿಸಿಕೊಂಡಿದೆ.
ವೈಜಯಂತಿ ಮಾಲಾ ನಟಿಸಿದ್ದ 'ಆಶಾ ನಿರಾಶಾ' ಎಂಬ ಮತ್ತೊಂದು ಕನ್ನಡ ಚಿತ್ರದಲ್ಲಿಯೂ ಲತಾ ಮಂಗೇಶ್ಕರ್ ಹಾಗೂ ಆಶಾ ಭೋಂಸ್ಲೆ ಅವರೊಂದಿಗೆ ಗೀತೆಯೊಂದನ್ನು ಹಾಡಿದ್ದು, ಈ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಆದರೆ, ಚಿತ್ರೀಕರಣ ಮುಗಿಸದ ಈ ಚಿತ್ರ ತೆರೆಗೆ ಬರಲೇ ಇಲ್ಲ.
ಭಾರತೀಯ ಚಿತ್ರರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಹಿನ್ನೆಲೆ ಗಾಯಕನಿಗೆ ಭಾರತೀಯ ಟ್ವೀಟರ್ ಹ್ಯಾಂಡಲ್ ಸಹ ಗೌರವ ಸೂಚಿಸಿದ್ದು, ಸುಮಾರು ಐದು ಸಾವಿರ ಗೀತೆಗಳನ್ನು ಹಾಡಿರುವ ಗಾಯಕನೆಂದು ಕೊಂಡಾಡಿದೆ.
ರಫಿಯ ಅಪರೂಪದ ಫೋಟೋಗಳಿಗೆ ಇಲ್ಲಿ ಕ್ಲಿಕ್ ಮಾಡಿ
'ಹಿನ್ನೆಲೆ ಗಾಯನದ ಅನಭಿಷಕ್ತ ದೊರೆ' ಎಂದೇ ಗೌರವಿಸಲ್ಪಡುವ ರಫಿ, ಪ್ರಣಯ, ಶಾಸ್ತ್ರೀಯ ಹಾಗೂ ರಾಕ್ ಆ್ಯಂಡ್ ರೋಲ್ ಸೇರಿ ವಿವಿಧ ಬಗೆಯ ಹಾಡುಗಳನ್ನು ಹಾಡಿದ್ದು, ಕನ್ನಡ ಸೇರಿ ಹಿಂದಿ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಸಿನಾಲೀಸ್, ಕ್ರಿಯೋಲ್ ಭಾಷೆಗಳಲ್ಲಿಯೂ ಹಾಡಿದ್ದಾರೆ.
ಭಾರತೀಯ ಸರಕಾರದಿಂದ 1967ರಲ್ಲಿ ಪದ್ಮಶ್ರೀ, 'ಹಮ್ ಕಿಸೀಸೆ ಕಮ್ ನಹೀ' ಚಿತ್ರದ 'ಕ್ಯೂ ಹೂವ ತೇರಾ ವಾದ' ಗೀತೆಗೆ 1977ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳಿಗೆ ಈ ಗಾಯಕ ಭಾಜನರಾಗಿದ್ದಾರೆ.
ರಫಿಯ ಪ್ರಖ್ಯಾತ ಗೀತೆಗಳಲ್ಲಿ ಕೆಲವು ಇಲ್ಲಿವೆ, ಕೇಳಿ ಆನಂದಿಸಿ....
ಕನ್ನಡದ ಒಂದೇ ಬಳ್ಳಿಯ ಹೂಗಳು ಚಿತ್ರದ ನೀನೆಲ್ಲೆ ನಡೆವೆ ದೂರ... ಗೀತ ರಚನೆ: ಗೀತಪ್ರಿಯ

ರಾಷ್ಟ್ರ ಪ್ರಶಸ್ತಿ ಪಡೆದ ಕ್ಯಾ ಹೂವಾ ತೇರಾ ವಾದಾ...

ಏ ದುನಿಯಾ ಹೇ ಮೊಹಫಿಲ್.....

ಏ ಛಾಂದ್‌ಸೇ ರೋಶನ್ ತೇರಾ....

ಅಮಿತಾಭ್ ಬಚ್ಚನ್, ಜಯಾ ನಟನೆಯ 'ಅಭಿಮಾನ್' ಚಿತ್ರದ ತೇರೇ ಬಿಂದಿಯಾ ರೇ...

ಗುಲಾಬಿ ಆಂಕೇ ತೋ ತೇರಿ ದೇಖಿ....

