ಚಿತ್ರರಂಗದ ’ದುರಂತ ನಾಯಕಿ’ಯನ್ನು ಸ್ಮರಿಸಿದ ಗೂಗಲ್ ಡೂಡಲ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 12:44 PM IST
Google Doodle Remembers Bollywood  "Tragedy Queen" Meena Kumari
Highlights

ಬಾಲಿವುಡ್ ಎಂದೂ ಮರೆಯದ ಹೆಸರು ಮೀನಾ ಕುಮಾರಿ. ಇವರ ಹೆಸರು ಕೇಳುತ್ತಿದ್ದಂತೆ ಸಿನಿ ರಸಿಕರ ಮನಸ್ಸು 50 ರ ದಶಕಕ್ಕೆ ಹೋಗಿ ನಿಲ್ಲುತ್ತದೆ. ಆ ಕಾಲಘಟ್ಟದಲ್ಲಿ ಉತ್ತುಂಗದಲ್ಲಿದ್ದ ಪ್ರತಿಭಾವಂತ ನಟಿಯಿವರು. ಮನೋಜ್ಞ ಅಭಿನಯ, ಅಪೂರ್ವ ಸೌಂದರ್ಯ, ನೃತ್ಯ, ಮಿಂಚಿನ ಕಣ್ಣೊಟದಿಂದಲೇ ಆ ಕಾಲದ ಹುಡುಗರ ಕನಸಿನ ರಾಣಿಯಾಗಿದ್ದರು ಮೀನಾ ಕುಮಾರಿ. ಇಂದು ಅವರ 85 ನೇ ಹುಟ್ಟುಹಬ್ಬ. ಹಾಗಾಗಿ ಗೋಗಲ್ ಡೂಡಲ್ ಮೀನಾ ಕುಮಾರಿ ಹುಟ್ಟುಹಬ್ಬವನ್ನು ಸ್ಮರಣಾರ್ಥವಾಗಿಸಿದೆ.

ಬೆಂಗಳೂರು (ಆ. 01): ಬಾಲಿವುಡ್ ಎಂದೂ ಮರೆಯದ ಹೆಸರು ಮೀನಾ ಕುಮಾರಿ. ಇವರ ಹೆಸರು ಕೇಳುತ್ತಿದ್ದಂತೆ ಸಿನಿ ರಸಿಕರ ಮನಸ್ಸು 50 ರ ದಶಕಕ್ಕೆ ಹೋಗಿ ನಿಲ್ಲುತ್ತದೆ. ಆ ಕಾಲಘಟ್ಟದಲ್ಲಿ ಉತ್ತುಂಗದಲ್ಲಿದ್ದ ಪ್ರತಿಭಾವಂತ ನಟಿಯಿವರು. ಮನೋಜ್ಞ ಅಭಿನಯ, ಅಪೂರ್ವ ಸೌಂದರ್ಯ, ನೃತ್ಯ, ಮಿಂಚಿನ ಕಣ್ಣೊಟದಿಂದಲೇ ಆ ಕಾಲದ ಹುಡುಗರ ಕನಸಿನ ರಾಣಿಯಾಗಿದ್ದರು ಮೀನಾ ಕುಮಾರಿ. ಇಂದು ಅವರ 85 ನೇ ಹುಟ್ಟುಹಬ್ಬ. ಹಾಗಾಗಿ ಗೋಗಲ್ ಡೂಡಲ್ ಮೀನಾ ಕುಮಾರಿ ಹುಟ್ಟುಹಬ್ಬವನ್ನು ಸ್ಮರಣಾರ್ಥವಾಗಿಸಿದೆ. 

1933, ಆಗಸ್ಟ್ 1 ರಂದು ಮೀನಾ ಕುಮಾರಿ ಹುಟ್ಟಿದರು. ಪರ್ಷಿಯಾದ ಅಲಿ ಭಕ್ಷ್ ಹಾಗೂ ಇಕ್ಬಾಲ್ ದಂಪತಿಯ ಮೂರನೇ ಮಗಳಿವರು. ತಂದೆ-ತಾಯಿ ಇಟ್ಟ ಹೆಸರು ಮಹಜಬೀನಾ ಬಾನು. ಸಿನಿಮಾ ಜಗತ್ತು ಇಟ್ಟ ಹೆಸರು ಮೀನಾ ಕುಮಾರಿ. ಕಲಾವಿದರ ಕುಟುಂಬವಾಗಿದ್ದರಿಂದ ಕಲೆ, ಅಭಿನಯ ರಕ್ತದಲ್ಲೇ ಬಂದು ಹೋಗಿತ್ತು. ತಮ್ಮ 4 ನೇ ವಯಸ್ಸಿಗೆ ಸಿನಿಮಾ ಜಗತ್ತು  ಪ್ರವೇಶಿಸಿದರು. 

ದುನಿಯಾ ಏಕ್ ಸರಾಯಿ, ಪಿಯಾ ಘರ್ ಆಜ, ವೀರ್ ಘಟೋತ್ಕಜ, ಮಧೋಶ್ ಸೇರಿದಂತೆ ಸಾಕಷ್ಟು ಚಿತ್ರಗಳು ಇವರಿಗೆ ಹೆಸರು ತಂದು ಕೊಟ್ಟಿತು. ಪರಿಣಿತಾ, ದೀರಾ, ಏಕ್ ಹೀ ರಾಸ್ತಾ, ಶಾರದಾ, ದಿಲ್ ಅಪನಾ, ಪಾಕಿಜಾ,  ಚಿತ್ರಗಳು ಇವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಿತು. ಚಿತ್ರರಂಗದ ಅನಭಿಶಕ್ತ ರಾಣಿಯಾಗಿ ಮೆರೆದರು ಮೀನಾ ಕುಮಾರಿ. ದುರಂತ ಎಂದರೆ ತೆರೆ ಮೇಲಿನಷ್ಟು ವರ್ಣ ರಂಜಿತ ಬದುಕು ವೈಯಕ್ತಿಕ ಜೀವನದಲ್ಲಿರಲಿಲ್ಲ. 

ಮೀನಾ ಕುಮಾರಿ ಬಾಲಿವುಡ್ ನಿರ್ದೇಶಕ ಕಮಲ್ ಅಮರೋಹಿಯನ್ನು ವಿವಾಹವಾದರು. ಕಮಲ್’ಗೆ ಅದಾಗಲೇ ಮದುವೆಯಾಗಿತ್ತು. ಆದರೆ ಈ ಮದುವೆ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ವೈಯಕ್ತಿಕ ಬದುಕು ಬಿರುಗಾಳಿ ಎಬ್ಬಿಸಿತು. ಇದೇ ನೋವಲ್ಲಿ ಮೀನಾ ಕುಡಿತಕ್ಕೆ ಶರಣಾದರು. ಕಡೆ ಕಡೆಗೆ ಕುಡಿತ ವ್ಯಸನವಾಗಿ ಹೋಯಿತು. ಇದೇ ಕೊರಗಿನಲ್ಲಿ ಕೇವಲ 39 ವರ್ಷಕ್ಕೆ ಇಹಲೋಕದಿಂದ ಮರೆಯಾದರು. 

ತೆರೆ ಮೇಲೆ ಅನಭಿಶಕ್ತ ರಾಣಿಯಾಗಿ ಮೆರೆದ ಮೀನಾ ಕುಮಾರಿ ಬದುಕಲ್ಲಿ ಮಾತ್ರ ದುರಂತ ನಾಯಕಿಯಾಗಿದ್ದು ವಿಪರ್ಯಾಸ.  

loader