ಉಪ್ಪು ಹುಳಿ ಖಾರ ಸಿನಿಮಾ ಸಿನಿಪ್ರೇಮಿಗಳಿಗೆ ಈಗ ಈ ರುಚಿ ಮೊದಲ ದಿನವೇ ಇಷ್ಟವಾಗಿದೆ. ಈ ಒಂದೇ ಎಂಟರ್'ಟೈನಿಂಗ್  ಡಿಷ್​'ನಲ್ಲಿ  ಈ ಮೂರು ಟೇಸ್ಟ್  ಸಖತ್  ವರ್ಕೌಟ್ ಆಗಿವೆ. ಅಷ್ಟೇ ಅಲ್ಲ, ಯುವ ನಟರಾದ ಶರತ್,ಧನು,ಶಶಿ ಚೆನ್ನಾಗಿಯೇ ಅಭಿನಯಿಸಿ ತೆರೆ ಮೇಲೆ ತೋರಿದ್ದಾರೆ.

ಬೆಂಗಳೂರು (ನ. 24): ಉಪ್ಪು ಹುಳಿ ಖಾರ ಸಿನಿಮಾ ಸಿನಿಪ್ರೇಮಿಗಳಿಗೆ ಈಗ ಈ ರುಚಿ ಮೊದಲ ದಿನವೇ ಇಷ್ಟವಾಗಿದೆ. ಈ ಒಂದೇ ಎಂಟರ್'ಟೈನಿಂಗ್ ಡಿಷ್​'ನಲ್ಲಿ ಈ ಮೂರು ಟೇಸ್ಟ್ ಸಖತ್ ವರ್ಕೌಟ್ ಆಗಿವೆ. ಅಷ್ಟೇ ಅಲ್ಲ, ಯುವ ನಟರಾದ ಶರತ್,ಧನು,ಶಶಿ ಚೆನ್ನಾಗಿಯೇ ಅಭಿನಯಿಸಿ ತೆರೆ ಮೇಲೆ ತೋರಿದ್ದಾರೆ.

ಅನುಶ್ರೀ, ಜಯಶ್ರೀ, ಉಕ್ರೇನ್ ಹುಡುಗಿ ಮಾಷಾ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದರೆ, ಮಾಲಾಶ್ರೀ ಅವರ ಖದರೇ ಬೇರೆ. ಹುಬ್ಬಳ್ಳಿ ಭಾಷೆಯ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕಥೆಯನ್ನ ತುಂಬಾ ಚೆನ್ನಾಗಿಯೆ ತೆಗದುಕೊಂಡು ಹೋಗಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಮೋದಿಯ ನೋಟ್ ಬ್ಯಾನ್'ನಿಂದ ಬ್ಯಾಂಕ್ ಮ್ಯಾನೇಜರ್'ಗಳು ಏನ್ ಮಾಡಿದರು. ರಾಜಕಾರಣಿಗಳು ತಮ್ಮ ದುಡ್ಡನ್ನ ಹೇಗೆ ಸೇಫ್ ಮಾಡಿದ್ದರು. ಎಲ್ಲವೂ ಇಲ್ಲಿ ಚಿತ್ರರೂಪ ಪಡೆದಿದೆ. ಉಪ್ಪು ಹುಳಿ ಖಾರ ಚಿತ್ರದಲ್ಲಿ ಎಲ್ಲವೂ ಇರೋದ್ರಿಂದ ಜನ ಕೂಡ ಈ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ. ಇನ್ಫೋಸಿಸ್ ಸುಧಾ ಮೂರ್ತಿ ಈ ಚಿತ್ರಕ್ಕೆ ಬೆನ್ನೆಲುಬಾಗಿಯೂ ನಿಂತಿದ್ದಾರೆ. ಕೊನೆಯಲ್ಲಿ ಬರೋ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.