ಮತ್ತೆ ಚಿತ್ರ ನಿರ್ಮಾಣಕ್ಕೆ ಇಳಿದ ಶಿಲ್ಪಾ ಗಣೇಶ್
ಗಣೇಶ್ ಅಭಿನಯದ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದ್ದು, ಅದರ ಫಸ್ಟ್‌ಲುಕ್ ಫೋಟೋ ಶೂಟ್ ಈಗಷ್ಟೆ ಅನಾವರಣಗೊಂಡಿದೆ.
ಈ ಚಿತ್ರದಲ್ಲಿ ಗಣೇಶ್ ಎಷ್ಟು ಹೊಸದಾಗಿ ಕಾಣುತ್ತಾರೆ ಎಂಬುದಕ್ಕೆ ಇಲ್ಲಿರುವ ಫೋಟೋಗಳೇ ಸಾಕ್ಷಿ. ಅಂದಹಾಗೆ ಚಿತ್ರದ ಹೆಸರು ‘ಗೀತಾ’.
ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ನಿರ್ಮಾಣದ ಚಿತ್ರವಿದು. ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಚಿತ್ರಗಳಿಗೆ ಕೆಲಸ ಮಾಡುವ ಮೂಲಕ ನಿರ್ದೇಶಕ ಸಂತೋಷ್ ಆನಂದರಾಮ್ ಜತೆ ಗುರುತಿಸಿಕೊಂಡಿರುವ ವಿಜಯ್ ನಾಗೇಂದ್ರ ಈ ಚಿತ್ರವನ್ನು
ನಿರ್ದೇಶಿಸುತ್ತಿದ್ದಾರೆ. ಇವರಿಗಿದು ಮೊದಲ ಸಿನಿಮಾ. ಜುಲೈ ೨ಕ್ಕೆ ಗಣೇಶ್ ಅವರ ಹುಟ್ಟುಹಬ್ಬ. ಹೀಗಾಗಿ ಅದು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲು ಫ್ರೆಶ್ ಆಗಿ ಕಾಣುವಂತಹ ಫೋಟೋಶೂಟ್ ಮಾಡಲಾಗಿದೆ.
‘ಗೀತಾ’ ಚಿತ್ರದ ಮೊದಲ ಲುಕ್ ಗಣೇಶ್‌ಹುಟ್ಟುಹಬ್ಬ ಜುಲೈ ೨ರಂದು ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಸೆಪ್ಟಂಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ವಿ. ಹರಿಕೃಷ್ಣ ಅವರ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ ವಿಜಯ್ ನಾಗೇಂದ್ರ ಅವರೇ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಕಲಾವಿದ ಹಾಗೂ ತಂತ್ರಜ್ಞರ ಆಯ್ಕೆ ಇನ್ನಷ್ಟೆ ಆಗಬೇಕಿದೆ.
