ಲಕ್ನೋ (ಆ. 12): ಇಂದು ಬಕ್ರೀದ್ ಹಬ್ಬದ ಸಂಭ್ರಮ. ಇಂದು ಕುರಿಗಳಿಗೆ ಎಲ್ಲಿಲ್ಲದ ಬೇಡಿಕೆ. ಬಕ್ರೀದ್ ಹಬ್ಬದಂದು ಸಲ್ಮಾನ್ ಖಾನ್ ಮಾರಾಟವಾಗಿದ್ದಾರೆ. ಅದೂ ಕಡಿಮೆ ಬೆಲೆಗೇನಲ್ಲ. ಒಳ್ಳೆಯ ಬೆಲೆಗೆ ಸೇಲ್ ಆಗಿದ್ದಾರೆ. 

ಉತ್ತರ ಕರ್ನಾಟಕ ಪ್ರವಾಹಕ್ಕೆ ಸನ್ನಿ ಲಿಯೋನ್‌ರಿಂದ 2 ಕೋಟಿ, ಸತ್ಯವೇ?

ಅರೇ! ಸಲ್ಮಾನ್ ಖಾನ್ ಮಾರಾಟವಾದ್ರಾ ಎಂದು ಅಚ್ಚರಿಪಡಬೇಡಿ! ಸಲ್ಮಾನ್ ಖಾನ್ ಎಂಬ ಹೆಸರಿನ ಕುರಿ 8 ಲಕ್ಷಕ್ಕೆ ಮಾರಾಟವಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಕ್ಷೇತ್ರ ಗೋರಖ್ ಪುರದಲ್ಲಿ ಈ ಘಟನೆ ನಡೆದಿದೆ. ಸಲ್ಮಾನ್ ಖಾನ್ ಹೆಸರಿನ ಕುರಿಯ ಮೈಮೇಲೆ ಅರೇಬಿಕ್ ಭಾಷೆಯಲ್ಲಿ ‘ಅಲ್ಲಾಹ್’ ಎಂದು ಬರೆಯಲಾಗಿತ್ತು. ಕುರಿ ಕೂಡಾ ನೋಡುವುದಕ್ಕೆ ಸಲ್ಮಾನ್ ಖಾನ್ ರೀತಿ ಹ್ಯಾಂಡ್ ಸಮ್ ಆಗಿದೆ ಎನ್ನುತ್ತಾರೆ ಮಾಲಿಕ. ಇದು 95 -100 ಕೆಜಿ ಭಾರವಿತ್ತು ಎನ್ನಲಾಗಿದೆ. 

 

‘ನಾವು ಸಲ್ಮಾನ್ ಖಾನ್ ನನ್ನು ನಮ್ಮ ಕುಟುಂಬದವನಂತೆಯೇ ನೋಡಿಕೊಳ್ಳುತ್ತಿದ್ದೆವು. ಅವನು ಬೆಡ್ ಮೇಲೆ ಮಲಗುತ್ತಿದ್ದ. ನಮ್ಮ ರೀತಿಯೇ ತಿನ್ನುತ್ತಿದ್ದ. ಅಚ್ಚರಿ ಎಂದರೆ ಇವನು ಹುಲ್ಲನ್ನು ತಿನ್ನುತ್ತಿರಲಿಲ್ಲ. ಚಿಪ್ಸ್, ಡ್ರೈಫ್ರೂಟ್ಸ್ ಗಳನ್ನು ತಿನ್ನುತ್ತಿದ್ದ. ನಾವು ದಿನಕ್ಕೆ 700 -800 ರೂ ಗಳನ್ನು ಖರ್ಚು ಮಾಡುತ್ತಿದ್ದೆವು’ ಎಂದಿದ್ದಾರೆ.