Asianet Suvarna News Asianet Suvarna News

ಹೋರಿ ಮುಂದೆ ತಕ ತಕ ಕುಣಿದ ಯುವತಿ ಗತಿ ಏನಾಯ್ತು

ಯುವತಿಯೊಬ್ಬಳು ಹೋರಿ ಮುಂದೆ ರೀಲ್ಸ್ ಮಾಡಲು ಹೋಗಿ ಗುಮ್ಮಿಸಿಕೊಳ್ಳೋದ್ರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದಾಳೆ. 

Girl Tries to Record Dance Reel In Front of Bull watch what happened next akb
Author
Bangalore, First Published Jun 7, 2022, 11:55 AM IST

ಇದೇನಿದ್ದರೂ ಸಾಮಾಜಿಕ ಜಾಲತಾಣಗಳ ಯುಗ ಹಣ್ಣು ಹಣ್ಣು ಅಜ್ಜ ಅಜ್ಜಿಯಿಂದ ಹಿಡಿದು ತೊದಲು ನುಡಿಯ ಮಕ್ಕಳೂ ರೀಲ್ಸ್ ಮಾಡುವವರೇ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಲು ಹೋಗಿ ಅನೇಕರು ಜೀವವನ್ನೇ ಕಳೆದುಕೊಂಡಿದ್ದಾರೆ. ಬೀದಿಗಳು ಪ್ರವಾಸಿತಾಣಗಳು ಪೇಟೆ ಮನೆ ಎನ್ನದೇ ಎಲ್ಲೆಂದರಲ್ಲಿ ಜನ ರೀಲ್ಸ್‌ ಮಾಡುವುದನ್ನು ನೀವು ನೋಡಿರಬಹುದು. ಅದೇ ರೀತಿ ಯುವತಿಯೊಬ್ಬಳು ಹೋರಿ ಮುಂದೆ ರೀಲ್ಸ್ ಮಾಡಲು ಹೋಗಿ ಗುಮ್ಮಿಸಿಕೊಳ್ಳೋದ್ರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದಾಳೆ. 

ಬ್ಲು ಜೀನ್ಸ್ ಕಪ್ಪು ಬಣ್ಣದ ಕ್ರಾಪ್ ಟಾಪ್ ಧರಿಸಿರುವ ಯುವತಿ ಕಂದು ಬಿಳಿ ಮಿಶ್ರಿತ ಬಣ್ಣದ ಹೋರಿ ಮುಂದೆ ಹಾಡೊಂದಕ್ಕೆ ಕುಣಿಯುತ್ತಿದ್ದಾಳೆ. ಈಕೆಯ ಆಟ ನೋಡಿದ ಹೋರಿಗೆ ಆಕೆಗೆರಡು ಬಾರಿಸಿ ಬಿಡಬೇಕು ಎನಿಸಿತೋ ಏನು ಸೀದಾ ಹಾಯುವುದಕ್ಕೆ ಹೋಗಿ ಆಕೆಯನ್ನು ಅಲ್ಲಿಂದ ಓಡಿಸಿದೆ. ಯುವತಿ ಕೂಡ ಹೋರಿ ಬರುತ್ತಿದ್ದಂತೆ ಸ್ಥಳದಿಂದ ಜಾಗ ಖಾಲಿ ಮಾಡಿ ಪ್ರಾಣ ಉಳಿಸಿಕೊಂಡಿದ್ದಾಳೆ. ನೋಡುಗರ ಮೊಗದಲ್ಲಿ ನಗು ಮೂಡಿಸುತ್ತಿರುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಬಟ್ನಿ ಕೆ ಮಿಮ್ಸ್ ಹೆಸರಿನ ಇನ್ಸ್ಟಾ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಒಂಭತ್ತು ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ನಗುವ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. 

ಒಟ್ಟಿನಲ್ಲಿ ಹೋರಿ ನನ್ನ ಮುಂದೆ ಈ ಆಟ ಎಲ್ಲ ಬೇಡ ಎಂದು ಯುವತಿಗೆ ಹೇಳುವಂತಿದೆ ಈ ವಿಡಿಯೋ. ಕೆಲ ದಿನಗಳ ಹಿಂದೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಹಾಕುವ ಹುಚ್ಚು ಹೊಂದಿದ್ದ ಯುವಕನೋರ್ವನನ್ನು ಬಂಧಿಸಿದ್ದರು. ಈತ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿ ತನ್ನ ಖಾತೆಯಲ್ಲಿ ಪೋಸ್ಟ್‌ ಮಾಡುತ್ತಿದ್ದ. ಹಾಗೆಯೇ ಕೆಲ ದಿನಗಳ ಹಿಂದೆ ಈತ ಎರಡು ದೋಣಿಗಳ ಮೇಲೆ ಕಾಲಿಟ್ಟಂತೆ ಚಲಿಸುವ ಎರಡು ಕಾರುಗಳ ಮೇಲೆ ತನ್ನ ಒಂದೊಂದು ಕಾಲುಗಳನ್ನು ಇಟ್ಟು ಸ್ಟಂಟ್ ಮಾಡಿದ್ದ ಇದರ ವಿಡಿಯೋವನ್ನು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನು ನೋಡಿದ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಕಂಬಿ ಹಿಂದೆ ಕೂರಿಸಿದ್ದಾರೆ.  

ರಾಜೀವ್ ಬಂಧಿತ ವ್ಯಕ್ತಿ. ಈತ ಭಾರಿ ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ಚೊಚ್ಚಲ ಚಿತ್ರ ಫೂಲ್ ಔರ್ ಕಾಂತೆ (1991) ನಲ್ಲಿ ನಟ ಅಜಯ್ ದೇವಗನ್ (Ajay Devgn) ಮಾಡಿದ ಸಾಹಸವನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ರಾಜೀವ್ ಈ ಸ್ಟಂಟ್‌ಗಾಗಿ ಅಜಾಗರೂಕತೆಯಿಂದ  ವಾಹನ ಚಾಲನೆ ಮಾಡಿದ್ದ ಮತ್ತು ಜನನಿಬಿಡ ರಸ್ತೆಯಲ್ಲಿ ವೀಲ್ಹಿಂಗ್ ಪ್ರದರ್ಶಿಸುತ್ತಿದ್ದ. ಹಾಗೆ ಮಾಡುವ ಮೂಲಕ ಅವನು ತನ್ನ ಪ್ರಾಣವನ್ನು ಮಾತ್ರವಲ್ಲದೆ ರಸ್ತೆಯಲ್ಲಿರುವ ಇತರ ಜನರ ಪ್ರಾಣವನ್ನೂ ಅಪಾಯಕ್ಕೊಡಿದ್ದ. ಹೀಗಾಗಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆತ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊ ಆಧರಿಸಿ, ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಈತನನ್ನು 21 ವರ್ಷ ಪ್ರಾಯದ ಸೊರಖ (Sorakha) ಗ್ರಾಮದ ನಿವಾಸಿ ರಾಜೀವ್ (Rajiv) ಎಂದು ಗುರುತಿಸಲಾಗಿದೆ. ಈತನಿಂದ ವಿಡಿಯೋ ಮಾಡಲು ಬಳಸಿದ್ದ ಎರಡು ಎಸ್‌ಯುವಿಗಳು ಮತ್ತು ಒಂದು ಬೈಕ್‌ನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ಸೆಕ್ಟರ್ 113 ಪೊಲೀಸ್ ಠಾಣೆಯ ಎಸ್‌ಎಚ್‌ಒ ಶರದ್ ಕಾಂತ್ (Sharad Kant) ಹೇಳಿದ್ದಾರೆ.

ಸ್ಟಂಟ್‌ ಮಾಡಲು ಬಳಸಿದ್ದ ಈ ಎರಡು ಟೊಯೊಟಾ ಫಾರ್ಚುನರ್‌ (Toyota Fortuners) ಕಾರುಗಳಲ್ಲಿ ಒಂದು ಮತ್ತು ಮತ್ತೊಂದು ಬೈಕ್‌ ರಾಜೀವ್ ಅವರ ಕುಟುಂಬಕ್ಕೆ ಸೇರಿದೆ. ಅವರು ವೀಡಿಯೊಗಾಗಿ ಮತ್ತೊಂದು ಫಾರ್ಚುನರ್ ಅನ್ನು ಸಂಬಂಧಿಕರಿಂದ ತೆಗೆದುಕೊಂಡಿದ್ದರು. ಈತ ಕೇವಲ ಸಾಮಾಜಿಕ ಮಾಧ್ಯಮಕ್ಕಾಗಿ (social media) ಮಾತ್ರ ವೀಡಿಯೊ ಮಾಡುತ್ತಿದ್ದ ಎಂದು ಎಸ್‌ಎಚ್‌ಒ ಹೇಳಿದ್ದಾರೆ. 

Follow Us:
Download App:
  • android
  • ios