ಕಿಡ್ನ್ಯಾಪ್, ಅತ್ಯಾಚಾರ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ರಾತ್ರಿ ಹೊತ್ತು ಯುವತಿಯರು ಒಂಟಿಯಾಗಿ ಓಡಾಡುವುದು ಸೇಫ್ ಅಲ್ಲ ಎನ್ನುವಂತಹ ವಾತಾವರಣ ಹುಟ್ಟಿಕೊಂಡಿದೆ. ಆದರೂ ಇವಕ್ಕೆಲ್ಲಾ ಹೆದರದೆ ಒಬ್ಬಂಟಿಯಾಗಿ ಓಡಾಡುವ ಯುವತಿಯರನ್ನು ನಾವು ಕಾಣುತ್ತೇವೆ. ಇದೇ ರೀತಿ ಒಂಟಿ ಯುವತಿಯೊಬ್ಬಳು ರಾತ್ರಿ ಹೊತ್ತು ಒಬ್ಬಂಟಿಯಾಗಿ ನಡೆದುಕೊಂಡು ಬರುತ್ತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿ ಬಂದ ಯುವಕರ ಗುಂಪೊಂದು ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಆದರೆ ಇದಾದ ಬಳಿಕ ಅವರೇ ಆಕೆಗೆ ಶಾಕ್ ಆಗುವಂತಹ ಉಡುಗೊರೆಯನ್ನೂ ಕೊಟ್ಟಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದೇನು? ಇಲ್ಲಿದೆ ವಿವರ

ಯುವತಿಯೊಬ್ಬಳು ರಾತ್ರಿ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಆಕೆಯನ್ನು ಯುವಕನೊಬ್ಬ ಹಿಂಬಾಲಿಸಿಕೊಂಡು ಬರುತ್ತಾನೆ. ಏನಾಗುತ್ತಿದೆ ಎಂದು ಯುವತಿ ಅರಿತುಕೊಳ್ಳುವ ಮೊದಲೇ ಆತ ಆಕೆಯ ಮೇಲೆರಗುತ್ತಾನಲ್ಲದೆ, ಅಲ್ಲೇ ನಿಂತಿದ್ದ ಕಪ್ಪು ಕಾರಿನ ಡಿಕ್ಕಿಯ ಬಳಿ ಕರೆದೊಯ್ಯುತ್ತಾನೆ. ಇವರೆಲ್ಲಾ ತನ್ನನ್ನು ಅಪಹರಿಸುತ್ತಿದ್ದಾರೆ ಎನ್ನುವ ಯುವತಿಗೆ ಮಾತ್ರ ಡಿಕ್ಕಿಯಲ್ಲಿದ್ದ ಕೇಕ್, ಬಲೂನ್'ಗಳನ್ನು ಕಂಡು ಶಾಕ್ ಆಗುತ್ತದೆ. ಅಸಲಿಗೆ ಅವರೆಲ್ಲಾ ಆಕೆಯ ಸ್ನೇಹಿತರಾಗಿದ್ದು, ಇಷ್ಟೆಲ್ಲಾ ಕಸರತ್ತು ಮಾಡಿದ್ದು ಆಕೆಯ ಹುಟ್ಟು ಹಬ್ಬದ ಪ್ರಯುಕ್ತ ಆಕೆಗೆ ನೀಡುವ ಶಾಕಿಂಗ್ ಗಿಫ್ಟ್ ಆಗಿತ್ತು. ಆದರೆ ತನ್ನ ಮೇಲಿನ ದಾಳಿಯಿಂದ ಗಾಬರಿಗೊಂಡಿದ್ದ ಯುವತಿ ಮಾತ್ರ ಸರ್ಪ್ರೈಜ್ ಕಂಡು ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕೆಂದು ತಿಳಿಯದೆ ನಿಂತಿದ್ದಾಳೆ. ಸದ್ಯ ಗೆಳೆಯರ ಈ ಕಿತಾಪತಿಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.