ಕ್ರಿಕೆಟಿಗನಿಗೆ ನಗ್ನ ಚಿತ್ರ ಸಮರ್ಪಿಸಿದ್ದ ನಟಿ ಗಣೇಶನ ಭಕ್ತೆಯಾಗಿದ್ದು ಹೀಗೆ!
ಕ್ರಿಕೆಟಿಗನೋರ್ವನಿಗೆ ತನ್ನ ನಗ್ನ ಚಿತ್ರ ಸಮರ್ಪಿಸುತ್ತೇನೆ ಎಂದು ಹೇಳಿ ಹಾಗೆಯೇ ಮಾಡಿದ್ದ ನಟಿ ಹಾಗೂ ಮಾಜಿ ಬಿಗ್ ಬಾಸ್ ಕಂಟೆಸ್ಟಂಟ್ ಇದೀಗ ಗಣೇಶನಿಗೆ ಭಕ್ತೆಯಾಗಿದ್ದು ಗಣೇಶ ನನ್ನ ಮಗ ಎಂದು ಹೇಳಿದ್ದಾರೆ.
ಮುಂಬೈ : ಮಾಜಿ ಬಿಗ್ ಬಾಸ್ ಕಂಟೆಸ್ಟಂಟ್ ಸೋಫಿಯಾ ಹಯಾತ್ ಇದೀಗ ಗಣೇಶನ ಭಕ್ತೆಯಾಗಿ ಬದಲಾಗಿದ್ದಾರೆ. ಅಲ್ಲದೇ ಲಾರ್ಡ್ ಗಣೇಶ ನನ್ನ ಮಗ ಎಂದು ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದು ಹಾಕಿಕೊಂಡಿದ್ದು ಇದೀಗ ಸಾಕಷ್ಟು ವೈರಲ್ ಆಗಿದೆ.
ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಸೋಫಿಯಾ ನಾನು ಗಣೇಶನ ತಾಯಿ, ಐ ಲವ್ ಗಣೇಶ, ಗಣೇಶನೇ ಅಲ್ಲಾಹ್, ಐ ಲವ್ ಮೈ ಸನ್ ಅಲ್ಲಾಹ್, ಗಣಪತಿ ಬಪ್ಪ ಮೋರ್ಯ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಶಿವನ ಬಗ್ಗೆಯೂ ಕೂಡ ಸೋಫಿಯಾ ಇಂತಹ ಅನೇಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದರು. ತಾನು ಶಿವನಿಗೆ ಜನ್ಮ ನೀಡಿದ್ದಾಗಿ ಹೇಳಿಕೊಂಡಿದ್ದರು.
ಇಷ್ಟೇ ಅಲ್ಲದೇ ಪದೇ ಪದೇ ಇಂತಹ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಲೇ ಇದ್ದಾರೆ. ಈ ಹಿಂದೆ ಕ್ರಿಕೆಟಿಗ ರೋಹಿತ್ ಶರ್ಮಾಗೆ ತಾವು ನಗ್ನ ಚಿತ್ರ ಸಮರ್ಪಿಸುವುದಾಗಿ ಹೇಳಿ ಹಾಗೆಯೇ ಮಾಡಿದ್ದರು.
I am Ganesh's mother. I love my Ganesh. Ganesh is Allah. I love my son Allah. Ganpati Bappa Morya
A post shared by Sofia Hayat (@sofiahayat) on Sep 13, 2018 at 6:33am PDT