ಸ್ಟೈಲಿಶ್ ಲುಕ್’ನಲ್ಲಿ ಗಣೇಶ್

First Published 24, Feb 2018, 4:38 PM IST
Ganesh Stylish look
Highlights

ನಟ ಗಣೇಶ್ ಸ್ಟೈಲಿಶ್ ಗಣೇಶ್ ಆಗಿದ್ದಾರೆ. ‘ಆರೆಂಜ್’ ಸಿನಿಮಾಕ್ಕಾಗಿ ಅವರು ತಮ್ಮ  ಹೇರ್ ಸ್ಟೈಲ್ ಬದಲಿಸಿಕೊಂಡು ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.

ಬೆಂಗಳೂರು (ಫೆ.24): ನಟ ಗಣೇಶ್ ಸ್ಟೈಲಿಶ್ ಗಣೇಶ್ ಆಗಿದ್ದಾರೆ. ‘ಆರೆಂಜ್’ ಸಿನಿಮಾಕ್ಕಾಗಿ ಅವರು ತಮ್ಮ  ಹೇರ್ ಸ್ಟೈಲ್ ಬದಲಿಸಿಕೊಂಡು ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.

ಅಂದ ಹಾಗೆ  ‘ಜೂಮ್’ ಚಿತ್ರದ ನಂತರ ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ಗಣೇಶ್ ಮತ್ತೆ ‘ಆರೆಂಜ್’ ನಲ್ಲಿ ಒಂದಾಗಿದ್ದು ನಿಮಗೂ ಗೊತ್ತಿದೆ. ವಿಶೇಷ ಅಂದ್ರೆ ನಟ ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವದ ದಿನದಂದೇ ಈ ಚಿತ್ರಕ್ಕೆ ಮುಹೂರ್ತ ಮುಗಿದಿದೆ. ಈಗ  ಚಿತ್ರೀಕರಣವೂ ಶುರುವಾಗಿದೆ. ನಿರ್ದೇಶಕರ ಬಹು ದಿನಗಳ ಹುಡುಕಾಟದ ನಂತರ ಈ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿ ಆಗಿ ಬಂದಿದ್ದಾರೆ. ಈ ಹಂತದಲ್ಲೀಗ ಚಿತ್ರ ತಂಡ ನಟ ಗಣೇಶ್ ಅವರ ಪಾತ್ರದ ಗೆಟಪ್ ಲಾಂಚ್ ಮಾಡಿದೆ. ಗಣೇಶ್ ಹೇರ್ ಸ್ಟೈಲ್ ಆ್ಯಂಡ್ ಹೇರ್ ಕಲರ್ ಎರಡು ಬದಲಾಗಿವೆ. ಹೊಸ ಲುಕ್‌ನಲ್ಲಿ ಗಣೇಶ್ ‘ಆರೆಂಜ್’ ಮೋಜು ಕೊಡಲು ಮುಂದಾಗಿದ್ದಾರೆ. ನಿರ್ದೇಶಕ ಪ್ರಶಾಂತ್ ರಾಜ್ ಚಿತ್ರಕ್ಕೆ ಕಥೆ, ಚಿತ್ರಕಥೆ  ಬರೆದಿದ್ದು, ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

loader