ಸ್ಯಾಂಡಲ್'ವುಡ್ ಚಿನ್ನದ ಗಣಿ  ಗೋಲ್ಡನ್  ಸ್ಟಾರ್  ಗಣೇಶ್ ಕಳೆದ ಕೆಲ ತಿಂಗಳಿಂದ ಮುವಾಯ್ ಥಾಯ್ ಅಭ್ಯಾಸ ನಡೆಸುತ್ತಿದ್ದರು. ಆಗಾಗ ಕೆಲ ಫೋಟೋಗಳನ್ನು ಟ್ವಿಟ್ಟರ್‌ಗೂ ಹಾಕುತ್ತಿದ್ದರೂ, ಈ ಕುರಿತಾಗಿ ಹೆಚ್ಚು ಹೇಳಿಕೊಂಡಿರಲಿಲ್ಲ.ಆದರೀಗ ಈ ವಿಚಾರ ಕುರಿತು ಮಾತನಾಡಿದ್ದಾರೆ.  ಅಷ್ಟೇ ಅಲ್ಲ, ಮುವಾಯ್ ಥಾಯ್‍ನ ರಾಯಭಾರಿ ಕೂಡ ಆಗಿದ್ದಾರೆ. 

ಬೆಂಗಳೂರು (ಅ.11): ಸ್ಯಾಂಡಲ್'ವುಡ್ ಚಿನ್ನದ ಗಣಿ ಗೋಲ್ಡನ್ ಸ್ಟಾರ್ ಗಣೇಶ್ ಕಳೆದ ಕೆಲ ತಿಂಗಳಿಂದ ಮುವಾಯ್ ಥಾಯ್ ಅಭ್ಯಾಸ ನಡೆಸುತ್ತಿದ್ದರು. ಆಗಾಗ ಕೆಲ ಫೋಟೋಗಳನ್ನು ಟ್ವಿಟ್ಟರ್‌ಗೂ ಹಾಕುತ್ತಿದ್ದರೂ, ಈ ಕುರಿತಾಗಿ ಹೆಚ್ಚು ಹೇಳಿಕೊಂಡಿರಲಿಲ್ಲ.ಆದರೀಗ ಈ ವಿಚಾರ ಕುರಿತು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಮುವಾಯ್ ಥಾಯ್‍ನ ರಾಯಭಾರಿ ಕೂಡ ಆಗಿದ್ದಾರೆ. 

ಥಾಯ್ಲೆಂಡ್‍ನಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಮುವಾಯ್ ಥಾಯ್ ಎಂಬ ಸಮರಕಲೆಯು ಭಾರತ ಸೇರಿದಂತೆ ಇತರೆ ಕಡೆ ಹೆಚ್ಚು ಜನಪ್ರಿಯವಾಗಿಲ್ಲ. ಈ ಸಮರಕಲೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಎಕ್ಸ್ಟ್ರೀಮ್ ಮುವಾಯ್ ಥಾಯ್ ಅಕಾಡೆಮಿ ಗಣೇಶ್ ಅವರನ್ನು ರಾಯಭಾರಿಯನ್ನಾಗಿ ಮಾಡಿದೆ. 

ಈ ಕುರಿತು ಇಂದು ಎಕ್ಸ್ಟ್ರೀಮ್ ಮುವಾಯ್ ಥಾಯ್ ಅಕಾಡೆಮಿ ಅಧಿಕೃತವಾಗಿ ಗಣೇಶ್ ಅವರನ್ನು ರಾಯಭಾರಿ ಎಂದು ಘೋಷಣೆ ಮಾಡಿದೆ. ಇನ್ನು ಇದಕ್ಕೆ ಬ್ರ್ಯಾಂಡ್ ಅಂಬಾಸೆಂಡರ್ ಆಗಿರೋ ಗಣೇಶ್ ಸುವರ್ಣ ನ್ಯೂಸ್ ಜೊತೆ ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದಾರೆ.