ಹೊಸದೊಂದು ಚಿತ್ರದಲ್ಲಿ ಜೆಕೆ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ಬಹಿರಂಗವಾಗುವ ಹೊತ್ತಿಗೆ ಆ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದು ನಿಂತಿರುವುದು ಇದರ ಇನ್ನೊಂದು ವಿಶೇಷ.  ಶ್ರೀ ಲಕ್ಷ್ಮೀ ಸಾಯಿ ಕ್ರಿಯೇಷನ್ಸ್ ಸಂಸ್ಥೆಯಡಿ ವಾಣಿ ರಾಜು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

ನಟ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಂ ಎಲ್ಲಿ? ಗಾಂಧಿನಗರದ ಗಲ್ಲಿಗಳಲ್ಲಿ ಹೀಗೊಂದು ಮಾತು ಕೇಳಿಬರುತ್ತಿದ್ದಾಗಲೇ ‘ಅಶ್ವಿನಿ ನಕ್ಷತ್ರ ’ಧಾರಾವಾಹಿಯ ಖ್ಯಾತಿಯ ನಟ ಕಾರ್ತಿಕ್ ಜಯರಾಂ ಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ನಾಗೇಂದ್ರ ಅರಸ್ ನಿರ್ದೇಶನದ ‘ಮೇ 1’ ಹೆಸರಿನ ಹೊಸ ಚಿತ್ರಕ್ಕೆ ಅವರು ಹೀರೋ ಅನ್ನೋದು ಅಷ್ಟೆ ಅಲ್ಲ, ಈ ಚಿತ್ರಕ್ಕೆ ಅವರೇ ಕತೆ ಮತ್ತು ಚಿತ್ರಕತೆ ಬರೆದಿದ್ದು.

ಹೊಸದೊಂದು ಚಿತ್ರದಲ್ಲಿ ಜೆಕೆ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ಬಹಿರಂಗವಾಗುವ ಹೊತ್ತಿಗೆ ಆ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದು ನಿಂತಿರುವುದು ಇದರ ಇನ್ನೊಂದು ವಿಶೇಷ. ಶ್ರೀ ಲಕ್ಷ್ಮೀ ಸಾಯಿ ಕ್ರಿಯೇಷನ್ಸ್ ಸಂಸ್ಥೆಯಡಿ ವಾಣಿ ರಾಜು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಅವರು ನಿರ್ಮಾಪಕರಾಗಿ ಚಿತ್ರರಂಗಕ್ಕೆ

ಪ್ರವೇಶಿಸುತ್ತಿರುವುದು ಇದೇ ಮೊದಲು. ಕನ್ನಡದ ಸಿನಿರಸಿಕರಿಗೆ ಒಂದೊಳ್ಳೆ ಚಿತ್ರ ಕೊಡಬೇಕೆನ್ನುವ ಹಂಬಲದಿಂದ ಅದ್ಧೂರಿಯಾಗಿಯೇ ಚಿತ್ರವನ್ನು ನಿರ್ಮಿಸಿದ್ದಾರಂತೆ. ಉಳಿದಂತೆ ಈ ಚಿತ್ರಕ್ಕೆ ಸತೀಶ್ ಬಾಬು ಸಂಗೀತ, ಕಿರಣ್ ಸತೀಶ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಅವರ ಈ ತನಕ ಅನುಭವವನ್ನು ಸಂಪರ್ಕವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರಂತೆ ನಿರ್ದೇಶಕರು. ನಟ ಜೆಕೆ ಇದರ ಹೀರೋ ಎನ್ನುವುದಷ್ಟೇ ಅಲ್ಲದೆ, ಕತೆ, ಚಿತ್ರಕತೆ ಬರೆದಿದ್ದಾರೆನ್ನುವ ವಿಶೇಷತೆಯ ಜತೆಗೆ ಇಲ್ಲಿರುವ ಅವರ ಪಾತ್ರವೂ ಅಷ್ಟೇ ಸ್ಪೆಷಲ್ ಎನ್ನಲಾಗಿದೆ. ನಟ ಕಾರ್ತಿಕ್ ಜಯರಾಂ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಜೆಕೆ ಅಂತಲೇ ಫೇಮಸ್ ಆಗಿದ್ದಕ್ಕೆ ಪ್ರಮುಖವಾಗಿ ಕಾರಣವಾಗಿದ್ದು ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯಲ್ಲಿನ ಅವರ ಪಾತ್ರ. ಅಲ್ಲಿ ಅವರ ಪಾತ್ರದ ಹೆಸರು ಜೆಕೆ ಅಂತಲೇ ಇತ್ತು. ‘ಮೇ 1’ ಚಿತ್ರದಲ್ಲೂ ಅವರ ಪಾತ್ರದ ಹೆಸರು ಸೂಪರ್ ಸ್ಟಾರ್ ಜೆಕೆ. ಆ ಮೂಲಕ ತಮ್ಮದೇ ಹೆಸರಿನ ಪಾತ್ರದೊಂದಿಗೆ ಮತ್ತೆ ತೆರೆ ಮೇಲೆ ಜಾದೂ ಮಾಡಲು ಬರುತ್ತಿದ್ದಾರೆ ಜೆಕೆ.

 ಒನ್ಸ್ ಎಗೇನ್ ಇದು ಜೆಕೆ ಅಭಿನಯದ ಸಿನಿಮಾ ಎಂದ್ಮೇಲೆ ಇದು ಹಾರರ್ ಚಿತ್ರ ಎನ್ನುವ ಅನುಮಾನ ಬೇಡ. ಬೆಳ್ಳಿತೆರೆ ಮಟ್ಟಿಗೆ ಜಕೆ ಸಿನಿ ಜರ್ನಿಯ ಇತಿಹಾಸವೇ ಹಾಗಿದೆ. ‘ಹಾರರ್ ಸಿನಿಮಾ ಎನ್ನುವುದು ನಿಜ. ಆದ್ರೆ ಸಾಕಷ್ಟು ಕುತೂಹಲಕಾರಿ ಅಂಶಗಳು ಇಲ್ಲಿವೆ. ಆ ಮಟ್ಟಿಗೆ ಕತೆ ವಿಭಿನ್ನ’ ಅಂತಾರೆ ಕಾರ್ತಿಕ್ ಜಯರಾಂ. ಅಂದ ಹಾಗೆ, ಚಿತ್ರದಲ್ಲಿ ಜೆಕೆ ಅವರಿಗೆ ಇಬ್ಬರು ನಾಯಕಿಯರು. ರಕ್ಷಾ ಸೋಮಶೇಖರ್ ಮತ್ತು ಪೂರ್ವಿ ಜೋಷಿ

(ಕನ್ನಡಪ್ರಭ ವಾರ್ತೆ)