ಬೆಂಗಳೂರು(ಅ.3): ಕನ್ನಡ ಚಿತ್ರರಂಗದ ತಿಥಿ ಚಿತ್ರದ ಗಡ್ಡಪ್ಪ ಈಗ ಫೇಮಸ್. ಒಂದೇ ಒಂದು ಚಿತ್ರದಿಂದಲೇ ಗಮನ ಸೆಳೆದಿದ್ದಾರೆ. ಎಲ್ಲರಿಗೂ ಇಷ್ಟವಾಗೋ ಗಡ್ಡಪ್ಪ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಕಮರೊಟ್ಟು ಚಕ್ ಪೋಸ್ಟ್ ಅನ್ನೋದು ಚಿತ್ರದ ಹೆಸರು. ಬೆಂಗಳೂರಲ್ಲಿ ಈ ಚಿತ್ರದ ಫೋಟೋ ಶೂಟ್ ಆಗಿದೆ. ಇತರ ಯುವಕರೂ ಅಭಿನಯಿಸಿದ ಈ ಚಿತ್ರದಲ್ಲಿ ತಿಥಿ ಚಿತ್ರದ ತಮ್ಮನ್ನ ಕೂಡ ಅಭಿನಯಿಸ್ತಿದ್ದಾರೆ. ಫೋಟೋ ಶೂಟ್ ನಲ್ಲೂ ಭಾಗಿಯಾಗಿದ್ದಾರೆ. ಮಾಮು ಟೀ ಅಂಗಡಿ ಚಿತ್ರ ಮಾಡಿದ್ದ ಪರಮೇಶ್ ಈ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾರೆ.