ಗಾಂಚಲಿ ಚಿತ್ರದ ನಟ ಆದರ್ಶ್‌ಗೆ 25 ಲಕ್ಷದ ಸೂಪರ್ ಬೈಕ್ ಗಿಫ್ಟ್

ಹೊಸ ಹುಡುಗ, ಹೊಸಬರ ತಂಡ ಸೇರಿ ಮಾಡಿದ್ದ ಸಿನಿಮಾ ‘ಗಾಂಚಲಿ’. ಈ ಚಿತ್ರ ಏನಾಯಿತು ಎಂದು ಕೇಳಿದರೆ ನಿರ್ಮಾಪಕರಿಂದ ಚಿತ್ರದ ನಾಯಕ ಆದರ್ಶ್‌ಗೆ 25 ಲಕ್ಷ ವೆಚ್ಚದ ಸೂಪರ್ ಬೈಕ್ ಗಿಫ್ಟ್ ಕೊಟ್ಟಿದ್ದಾರೆ. ಅಲ್ಲಿಗೆ ಸಿವಿಮಾ ಯಶಸ್ವಿಯಾಗಿದೆ ಎಂಬುದು ನಿರ್ಮಾಪಕರ ಮಾತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂದಾಹಗೆ ಈ ಚಿತ್ರ ಈಗ 20 ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸುತ್ತಿದೆ. ಈ 25ರ ಸಂಭ್ರಮಕ್ಕಾಗಿಯೇ ಚಿತ್ರ ನಿರ್ಮಾಪಕ ಅಶೋಕ್ 25 ಲಕ್ಷ ವೆಚ್ಚ ಸೂಪರ್ ಬೈಕ್ ಅನ್ನು ನಟ ಆದರ್ಶ್ ಅವರಿಗೆ ಕೊಟ್ಟಿದ್ದಾರೆ.

ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿ, ನಮ್ಮ ನಿರೀಕ್ಷೆಯಂತೆ ಹಾಕಿದ ಬಂಡವಾಳ ವಾಪಸ್ಸು ಬಂದಿದ್ದೆ. ಅದೇ ಖುಷಿಯಲ್ಲಿ ಈ ಉಡುಗೋರೆ ನೀಡಲಾಗುತ್ತಿದೆ ಎಂಬುದು ನಿರ್ಮಾಪಕರ ಮಾತು.