ನಟಿಗೆ ಹಲವು ಸಂಘಟನೆಗಳಿಂದ ಜೀವ ಬೆದರಿಕೆ ಕೂಡ ಇದೆ. ಬಿಜೆಪಿ ಮುಖಂಡನೊಬ್ಬ ನಟಿ  ತಲೆಗೆ 10 ಕೋಟಿ ಬಹುಮಾನ ಕೂಡ ಘೋಷಿಸಿದ್ದಾನೆ

ಬೆಂಗಳೂರು(ನ.20): ಪದ್ಮಾವತಿ ಚಿತ್ರದ ಅಭಿನಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಹಲವು ಸಂಘಟನೆಗಳಿಂದ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಅವರ ನಿವಾಸಕ್ಕೆ ಭದ್ರತೆ ಒದಗಿಸಲು ಡಿಜಿ-ಐಜಿಪಿ ನೀಲಮಣಿ ರಾಜುಗೆ ಗೃಹಸಚಿವರು ಪತ್ರ ಬರೆದಿದ್ದಾರೆ.

ವಸಂತನಗರದ ನಂದಿದುರ್ಗ ರಸ್ತೆಯಲ್ಲಿ ದೀಪಿಕಾ ಪಡುಕೋಣೆ ಅವರ ನಿವಾಸವಿದ್ದು, ಹಿಂದಿ ಚಿತ್ರ ಪದ್ಮಾವತಿಯ ಬಗ್ಗೆ ಇತ್ತೀಚಿಗೆ ರಾಷ್ಟ್ರಮಟ್ಟದಲ್ಲಿ ವಿವಾದ ಉಂಟಾಗಿದ್ದು, ನಟಿಗೆ ಹಲವು ಸಂಘಟನೆಗಳಿಂದ ಜೀವ ಬೆದರಿಕೆ ಕೂಡ ಇದೆ. ಬಿಜೆಪಿ ಮುಖಂಡನೊಬ್ಬ ನಟಿ ತಲೆಗೆ 10 ಕೋಟಿ ಬಹುಮಾನ ಕೂಡ ಘೋಷಿಸಿದ್ದಾನೆ. ಈ ಹಿನ್ನಲೆಯಲ್ಲಿ ದೀಪಿಕಾ ಅವರ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.