ದಂಡುಪಾಳ್ಯ 2 ಚಲನಚಿತ್ರ ಬಿಡುಗಡೆ ಮಾಡಬೇಡಿ ಅಂತಾ ದಂಡುಪಾಳ್ಯ ಹಂತಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ದಂಡು ಪಾಳ್ಯ ಗ್ಯಾಂಗ್, ತಿಂಡಿ-ಊಟ ಬಿಟ್ಟು ಚಲನಚಿತ್ರ ಬಿಡುಗಡೆಗೊಳಿಸದಂತೆ ಪ್ರತಿಭಟನೆಗೆ ಮುಂದಾಗಿದೆ.
ಬೆಳಗಾವಿ(ಜು.12): ದಂಡುಪಾಳ್ಯ 2 ಚಲನಚಿತ್ರ ಬಿಡುಗಡೆ ಮಾಡಬೇಡಿ ಅಂತಾ ದಂಡುಪಾಳ್ಯ ಹಂತಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ದಂಡು ಪಾಳ್ಯ ಗ್ಯಾಂಗ್, ತಿಂಡಿ-ಊಟ ಬಿಟ್ಟು ಚಲನಚಿತ್ರ ಬಿಡುಗಡೆಗೊಳಿಸದಂತೆ ಪ್ರತಿಭಟನೆಗೆ ಮುಂದಾಗಿದೆ.
ನಾವು ಎಷ್ಟೇ ಪತ್ರ ಬರೆದರೂ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ನಮ್ಮೊಂದಿಗೆ ಬಂದು ಮಾತನಾಡಿಲ್ಲ. ಚಿತ್ರ ತಂಡದ ಯಾವೊಬ್ಬ ಸದಸ್ಯನೂ ನಮ್ಮನ್ನ ಭೇಟಿ ಮಾಡಿಲ್ಲ. ಹೀಗಾಗಿ ನಾವು ಚಿತ್ರ ಬಿಡುಗಡೆಯನ್ನು ಖಂಡಿಸುತ್ತೇವೆ. ದಂಡುಪಾಳ್ಯ 2 ಬಿಡುಗಡೆಯಾಗಬಾರದು, ಚಿತ್ರತಂಡ ನಮ್ಮನ್ನ ಭೇಟಿಯಾಗಬೇಕು, ಅಲ್ಲಿವರೆಗೂ ನಾವು ಏನನ್ನೂ ಸೇವಿಸುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ. ಜೈಲು ಅಧಿಕಾರಿಗಳು ದಂಡುಪಾಳ್ಯ ಗ್ಯಾಂಗ್ ಮನವೊಲಿಸಲು ಯತ್ನಿಸುತ್ತಿದ್ದಾರೆ.
