ನಿರ್ದೇಶಕ ಜೋಗಿ ಪ್ರೇಮ್ ಹಣ ತಗೊಂಡು ಮೋಸ ಮಾಡಿದ್ರಾ? ನಿರ್ಮಾಪಕರೊಬ್ಬರ ಮಾತಿನ ನಂತರ ಇಂಥ ಪ್ರಶ್ನೆ ಎದುರಾಗಿದೆ.  ಹಾಗಾದರೆ ನಿರ್ಮಾಪಕರೊಬ್ಬರು ಪ್ರೇಮ್ ಅವರನ್ನು ಟೋಪಿ ಪ್ರೇಮ್ ಎನ್ನಲು ಕಾರಣ ಏನು?

ಬೆಂಗಳೂರು[ನ.20] ತಾರಕಾಸುರ ಸಿನಿಮಾದ ಕುರಿತು ಮಾಹಿತಿ ಹಂಚಿಕೊಳ್ಳಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಶ್ರೀನಿವಾಸ್ ಜೋಗಿ ಪ್ರೇಮ್ ಅವರನ್ನು ಟೋಪಿ ಪ್ರೇಮ್ ಎಂದು ಕರೆದಿದ್ದಾರೆ.

Add Asianetnews Kannada as a Preferred SourcegooglePreferred

.ಸಿನಿಮಾ ಮಾಡ್ತೀನಿ ಅಂತಾ 14 ವರ್ಷ ಆಯ್ತು. ಇನ್ನೂ ಟೋಪಿ ಹಾಕೊಂಡು ಓಡಾಡ್ತಿದ್ದಾರೆ. ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಓಡಾಡಿಕೊಂಡು ನಿಂತಿದ್ದಾರೆ. 10 ಲಕ್ಷ ತೆಗೆದುಕೊಂಡು ಹದಿನಾಲ್ಕು ವರ್ಷ ಆದ್ರೂ ಸಿನಿಮಾ ಮಾಡಿಲ್ಲ. ಹಣನೂ ವಾಪಸ್ ಕೊಟ್ಟಿಲ್ಲ. ತುಂಬಾ ಕೇಳಿಕೊಂಡಾಗ ಎರಡು ಲಕ್ಷ ಮಾತ್ರ ಕೊಟ್ಟಿದ್ದಾರೆ. ಇನ್ನೂ ಕಥೆ ಮಾಡಿಲ ಹತ್ತ ವರ್ಷ ಆಗಿದೆ ಎಂದರು.

ತಮಿಳು‌ ಸಿನಿಮಾಗಳ ವಿರುದ್ಧ ನಿರ್ಮಾಪಕ ಕನಕಪುರ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಬೋ 2.0 ಜೊತೆಗೆ ತಾರಕಾಸುರ ತೆರೆಗೆ ಬರ್ತಿದೆ. ರೋಬೊ ಬರಲಿ ಆದ್ರೆ ಕನ್ನಡ ಸಿನಿಮಾಗೆ ತೊಂದರೆ ಆಗಬಾರದು. ರೋಬೋ ಚಿತ್ರದಿಂದ ನಮ್ಮ ಸಿನಿಮಾಗೆ ತೊಂದರೆ ಆದ್ರೆ ಉಗ್ರ ಹೋರಾಟ ಮಾಡೋದು ಖಚಿತ ಎಂದು ಗುಡುಗಿದರು.