ನಾಲ್ಕು ನಿಮಿಷಕ್ಕೆ ಐನೂರು ರೂಪಾಯಿ ಕೊಟ್ಟರು ಜನ!

Four minutes teaser cost 500 rupees for The Villain movie
Highlights

ಒಂದು ಸಿನಿಮಾ, ಎರಡು ಟೀಸರ್! ಟೀಸರ್ ನೋಡುವುದಕ್ಕೆ ಐನೂರು ರುಪಾಯಿ. ಸಂಗ್ರಹಿಸಿದ ಹಣ ಐವರಿಗೆ ಉಡುಗೊರೆ! ಮತ್ತೊಮ್ಮೆ ಪ್ರೇಮ್ ಕಮಾಲ್ ಮಾಡಿದ್ದಾರೆ.

ಹೇಳಿ ಕೇಳಿ ಅವರು ಇಂಥದ್ದರಲ್ಲಿ ಹೆಸರುವಾಸಿ. ಬೇರೆ ಯಾರೇ ಆಗಿದ್ದರೂ ಟೀಸರ್ ಷೋ ಮಾಡುವ ಆಲೋಚನೆಯನ್ನೇ ಮಾಡುತ್ತಿರಲಿಲ್ಲ. ಪ್ರೇಮ್ ಅದನ್ನೂ ಮಾಡಿ ಗೆದ್ದರು.
ಟೀಸರ್ ಹೇಗಿದೆ? ಅದು ಕತೆ ಹೇಳುತ್ತಿದೆಯಾ? 
ಸಿನಿಮಾದ ದೃಶ್ಯಗಳಿರುವ ಟೀಸರಾ? ಯಾರಿಗೆ ಬೇಕು ದೆಲ್ಲ! ಸುದೀಪ್‌ಗೊಂದು ಶಿವಣ್ಣಗೊಂದು- ಎರಡು ಪ್ರತ್ಯೇಕ ಟೀಸರ್ ಬಂದು ಬಿತ್ತು. ಹತ್ತು ಲಕ್ಷ ಮಂದಿ  ರಾತ್ರೋ ರಾತ್ರಿ ನೋಡಿದರು. ಟೀಸರ್‌ನಲ್ಲಿ ಇದ್ದದ್ದು ಇರುವೆ ಮತ್ತು ಸುದೀಪ್. ಮತ್ತೊಂದರಲ್ಲಿ ಒಂದು ತಲೆ ಶಿವಣ್ಣ, ಸಿಡಿದೆದ್ದರೆ ಹತ್ತು ತಲೆ ರಾವಣ ಅನ್ನೋ ಡೈಲಾಗ್! ಅಷ್ಟಕ್ಕೇ ಮಂದಿ ಚಪ್ಪಾಳೆ ತಟ್ಟಿದರು. ಪ್ರೇಮ್ ಮನಸ್ಸು ಮುಟ್ಟಿದರು.

ಟೀಸರ್ ರಿಲೀಸ್ ಮಾಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ. ಸಿನಿಮಾ ರಿಲೀಸ್ ಮಾಡೋದಕ್ಕೇ ಥೇಟರ್ ಇಲ್ಲ ಅನ್ನೋ ಹೊತ್ತಿಗೆ ಐದು ಪರದೆಗಳಲ್ಲಿ ಟೀಸರ್ ಬಿಟ್ಟರು. ಒಂದೊಂದೂ ಎರಡೆರಡು ನಿಮಿಷದ ಟೀಸರ್. ಕೂತು ಏಳುವಷ್ಟರಲ್ಲಿ ಟೀಸರ್ ಮುಗಿದರೂ ಫೀಲಿಂಗ್ ಉಳಿಯಿತು. ಅದಕ್ಕೆ ಕಾರಣ ನೊಂದಿದ್ದ ನಿರ್ದೇಶಕರಿಗೆ ಸಹಾಯಧನ ನೀಡಿದ್ದು. ನೆರವು ಪಡೆದ ನಿರ್ದೇಶಕರು ಐವರು. ಆನಂದ್ ಪಿ. ರಾಜು, ಎ.ಟಿ.ರಘು, ಬೂದಾಳ ಕೃಷ್ಣ ಮೂರ್ತಿ ಮತ್ತು ಹಿರೇಮಠ್.

ಪ್ರೇಮ್ ಬ್ರಾಂಡಿಂಗ್‌ಗಳನ್ನೂ ಕನ್ನಡಕ್ಕೆ ತಂದರು. ಟೈಮೆಕ್ಸ್ ಹಾಗೂ ಡೈರಿ ಡೇ ಸಂಸ್ಥೆಗಳು ‘ದಿ ವಿಲನ್’ ಚಿತ್ರಕ್ಕೆ ಬ್ರಾಂಡಿಂಗ್ ಪಾರ್ಟನರ್‌ೆ. ಟೈಮೆಕ್ಸ್ ಸಂಸ್ಥೆ ದಿ ವಿಲನ್ ಹೆಸರಲ್ಲಿ ಕೈಗಡಿಯಾರ ಹೊರತರಲಿದೆ. ಆ ಮಾಲಿಕೆಯ ಮೊದಲ ವಾಚುಗಳ ಬೆಲೆ ಒಂದು ಲಕ್ಷ. ಅವು ಎಚ್.ಡಿ. ಕುಮಾರಸ್ವಾಮಿ, ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್, ಶಿವರಾಜ್ ಕುಮಾರ್ ಹಾಗೂ ಪ್ರೇಮ್‌ಗೆ ಉಡುಗೊರೆಯಾಗಿ ಸಿಕ್ಕವು. ಸಿಎಂ ವಾಚ್ ಉಡುಗೊರೆ ಪಡೆಯುತ್ತಿರುವಾಗ ಯಾರೋ ಇದು ಹೋಬ್ಲೋಟ್ ಅಲ್ಲ ಅಂದರು. ಜನ ನಕ್ಕರು.

ಮೂರು ಗಂಟೆ ಸಿನಿಮಾ ವಿಲನ್!
ವಿಲನ್ ಕತೆ ಏನು? ಪ್ರೇಮ್ ಹೇಳಲಿಲ್ಲ. ಇದು ಕನ್ನಡದ ಅತ್ಯಂತ ದುಬಾರಿ ಸಿನಿಮಾ. ಮೂರು ಗಂಟೆಯಸಿನಿಮಾ. ಒಂದು ಗಂಟೆ ಗ್ರಾಫಿಕ್ ವರ್ಕ್ ಇರುತ್ತೆ. ತಾಯಿ ಮಗ ಸೆಂಟಿಮೆಂಟಿಗೆ ಮೋಸವಿಲ್ಲ. ಆ್ಯಕ್ಷನ್ ಪ್ರಿಯರಿಗೆ ಶಿವಣ್ಣ- ಸುದೀಪ್ ಚೇಸ್ ಮತ್ತು ಸುದೀಪ್- ಮಿಥುನ್ ಫೇಸ್‌ಟುಫೇಸ್ ಇದ್ದೇ ಇದೆ.

loader