Asianet Suvarna News Asianet Suvarna News

ಇದೇ ಮೊದಲ ಬಾರಿಗೆ ಡಬ್ಬಿಂಗ್ ಸಿನಿಮಾದ ಆಡಿಯೋ ರಿಲೀಸ್

ಕಮಾಂಡೋ ಚಿತ್ರ ಸಕಲ ಸಿದ್ಧತೆಗಳೊಂದಿಗೆ ತೆರೆಕಾಣಲು ಸಜ್ಜಾಗಿದೆ. ಹರಿವು ಕ್ರಿಯೇಷನ್ಸ್ ತನ್ನ ಚೊಚ್ಚಲ ಕಾಣಿಕೆಯಾಗಿ ಕಮಾಂಡೋ ಎಂಬ ಡಬ್ಬಿಂಗ್ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಚಿತ್ರದ ಹಾಡುಗಳನ್ನು ಕನ್ನಡದ ಪ್ರತಿಭೆಗಳು
ಹಾಡಿದ್ದಾರೆ.  

For the first time Dabbing movie audio will be release
Author
Bengaluru, First Published Aug 22, 2018, 10:48 AM IST

ಬೆಂಗಳೂರು (ಆ. 22): ಕನ್ನಡ ಸಿನಿಮಾಗಳು ಸಿನಿಮಾ ಬಿಡುಗಡೆಗೆ ಮುಂಚೆ ಟೀಸರ್ ರಿಲೀಸ್ ಮಾಡಿ, ನಂತರ ಆಡಿಯೋ ರಿಲೀಸ್ ಮಾಡುವುದನ್ನು ಕೇಳಿದ್ದೀರಿ. ಒಂದು ಸಿನಿಮಾದ ಆಡಿಯೋ ರಿಲೀಸ್ ಮಾಡುತ್ತಿದ್ದಾರೆ ಅಂದರೆ ಸದ್ಯದಲ್ಲೇ ಆ ಚಿತ್ರ ತೆರೆ ಕಾಣುತ್ತದೆ ಎಂದು ಅರ್ಥ.

ಇದೇ ಮೊದಲ ಬಾರಿಗೆ ಇದೇ ತಂತ್ರವನ್ನು ಕನ್ನಡಕ್ಕೆ ಡಬ್ ಆಗಿರುವ ಸಿನಿಮಾವೊಂದು ಬಳಸುತ್ತಿದೆ. ಹರಿವು ಕ್ರಿಯೇಷನ್ಸ್ ತಂಡ ಅಜಿತ್‌ಕುಮಾರ್ ಮತ್ತು ಕಾಜಲ್ ಅಗರ್‌ವಾಲ್ ಅಭಿನಯಜ ಕಮಾಂಡೋ ಎಂಬ ಡಬ್ಬಿಂಗ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಇಟ್ಟುಕೊಂಡಿದೆ. ಅಲ್ಲಿಗೆ ಡಬ್ಬಿಂಗ್ ಚಿತ್ರವೊಂದು ಕನ್ನಡದಲ್ಲೂ ತನ್ನ ಬಲವಾದ ಹೆಜ್ಜೆಗಳನ್ನು ಊರಲು ಸಿದ್ಧತೆ ನಡೆಸಿದೆ ಎನ್ನಬಹುದು. ಇಲ್ಲಿಯ ತನಕ ಅಂಥ ಪ್ರಚಾರವಿಲ್ಲದೇ, ಡಬ್ಬಿಂಗ್ ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು.

ಈಗ ಕಮಾಂಡೋ ಚಿತ್ರ ಸಕಲ ಸಿದ್ಧತೆಗಳೊಂದಿಗೆ ತೆರೆಕಾಣಲು ಸಜ್ಜಾಗಿದೆ. ಹರಿವು ಕ್ರಿಯೇಷನ್ಸ್ ತನ್ನ ಚೊಚ್ಚಲ ಕಾಣಿಕೆಯಾಗಿ ಕಮಾಂಡೋ ಎಂಬ ಡಬ್ಬಿಂಗ್ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಚಿತ್ರದ ಹಾಡುಗಳನ್ನು ಕನ್ನಡದ ಪ್ರತಿಭೆಗಳು ಹಾಡಿದ್ದಾರೆ. ಸೋನಿ ಮ್ಯೂಸಿಕ್ ಇಂಡಿಯಾ ಇದರ ಹಾಡುಗಳು ಹಂಚಿಕೆ ಮಾಡುತ್ತಿದೆ. ಸೋನಿ ಮ್ಯೂಸಿಕ್ ಸಂಸ್ಥೆಯ ಅಧಿಕಾರಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಆಹ್ವಾನ ಪತ್ರಿಕೆ ಮಾಧ್ಯಮ ಸಂಸ್ಥೆಗಳ ಕೈ ಸೇರಿದೆ.

ಇಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಆಡಿಯೋ ಕಾರ್ಯಕ್ರಮ ಏರ್ಪಾಡಾಗಿದೆ.

Follow Us:
Download App:
  • android
  • ios