ಪಿಲೇಟ್ಸ್'ನಿಂದ ದೇಹ ಹಗುರವಾಗುತ್ತೆ, ಫಿಟ್‌'ನೆಸ್‌ ಬರುತ್ತೆ. ಆರೋಗ್ಯ ಸುಧಾರಣೆಯಾಗೋದು ಗ್ಯಾರೆಂಟಿ. ನಿಮ್ಮ ಕೈಕಾಲಿಗೆ ಶಕ್ತಿ ಬರುತ್ತೆ, ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತೆ.

ಬಾಲಿವುಡ್‌ನ ಚಬ್ಬೀ ಗರ್ಲ್ ಅಲಿಯಾ ಭಟ್‌ ಸದ್ಯಕ್ಕೆ ಫಾಲೋ ಮಾಡ್ತಿರೋದು ಪಿಲೇಟ್ಸ್‌(Pilates)ನ್ನ. ಯಾಸ್ಮಿನ್‌ ಕರಾಚಿವಾಲಾ ಆಕೆಯ ಟ್ರೈನರ್‌. ಇದರ ಜೊತೆಗೆ ಕಾರ್ಡಿಯೋ ಎಕ್ಸರ್‌'ಸೈಸ್‌, ಕಾಲು, ಭುಜದ ಎಕ್ಸರ್‌ಸೈಜ್‌ಗಳನ್ನೂ ನಿತ್ಯ ಮಾಡ್ತಾರಂತೆ. ಈಗ ನಿಮಗೊಂದು ಸಂಶಯ ಬಂದಿ­ರಬಹುದು. ‘ಪಿಲೇಟ್ಸ್‌' ಅಂದರೆ ಏನು ಅಂತ. 

ಪಿಲೇಟ್ಸ್‌ ಅನ್ನೋದೊಂದು ವ್ಯಾಯಾಮ ಪದ್ಧತಿ. 20 ರ ದಶಕದಲ್ಲಿ ಜೋಸೆಫ್‌ ಪಿಲೆಟ್ಸ್‌ ಇದನ್ನು ಕಂಡುಹಿಡಿದ. ದೇಹದ ಮೇಲೆ ನಿಯಂತ್ರಣ ಸಾಧಿಸೋದು ಈ ವ್ಯಾಯಾಮದಲ್ಲಿ ಮುಖ್ಯವಾಗುತ್ತೆ. ಉಸಿರಾಟ ಮತ್ತು ವ್ಯಾಯಾಮ ಎರಡನ್ನೂ ಒಳಗೊಂಡ ಈ ಎಕ್ಸರ್‌'ಸೈಸ್‌'ನ್ನು ಮಾಡೋದಕ್ಕೆ ಟ್ರೈನರ್‌ ಸಹಾಯ ಬೇಕು. 

ಏನು ಉಪಯೋಗ?
ಪಿಲೇಟ್ಸ್'ನಿಂದ ದೇಹ ಹಗುರವಾಗುತ್ತೆ, ಫಿಟ್‌'ನೆಸ್‌ ಬರುತ್ತೆ. ಆರೋಗ್ಯ ಸುಧಾರಣೆಯಾಗೋದು ಗ್ಯಾರೆಂಟಿ. ನಿಮ್ಮ ಕೈಕಾಲಿಗೆ ಶಕ್ತಿ ಬರುತ್ತೆ, ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತೆ.

(epaper.kannadaprabha.in)